ADVERTISEMENT

ಪೊಲೀಸರ ಜತೆ ಎಡಪಕ್ಷ ಕಾರ್ಯಕರ್ತರ ಘರ್ಷಣೆ

ಪಿಟಿಐ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಕೋಲ್ಕತ್ತದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಎಡಪಕ್ಷಗಳ ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್ ಮುರಿಯಲು ಯತ್ನಿಸಿದರು  –ರಾಯಿಟರ್ಸ್ ಚಿತ್ರ
ಕೋಲ್ಕತ್ತದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಎಡಪಕ್ಷಗಳ ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್ ಮುರಿಯಲು ಯತ್ನಿಸಿದರು –ರಾಯಿಟರ್ಸ್ ಚಿತ್ರ   
ಕೋಲ್ಕತ್ತ: ರಾಜ್ಯ ಸಚಿವಾಲಯ ಕಚೇರಿಗೆ ಮುತ್ತಿಗೆ ಹಾಕಲು ಅಡ್ಡಿಪಡಿಸಿದ ಪೊಲೀಸರ ಜತೆ ಎಡಪಕ್ಷಗಳ ಕಾರ್ಯಕರ್ತರು ಘರ್ಷಣೆಗಿಳಿದ ಘಟನೆ ಸೋಮವಾರ ಇಲ್ಲಿ ನಡೆದಿದೆ. 
 
ರೈತರ ಸಮಸ್ಯೆ, ನಿರುದ್ಯೋಗ ಇನ್ನಿತರ ವಿಚಾರಗಳನ್ನು ಇಟ್ಟುಕೊಂಡು ಎಡಪಕ್ಷಗಳು ‘ಸಚಿವಾಲಯಕ್ಕೆ ಮುತ್ತಿಗೆ’ ಕಾರ್ಯಕ್ರಮ ಹಮ್ಮಿಕೊಂಡಿದ್ದವು. 
 
ಮಾಯೊ ರಸ್ತೆ, ಡಫರಿನ್ ರಸ್ತೆ, ಹಾಸ್ಟಿಂಗ್ಸ್ ಹಾಗೂ ಸಂತರಗಚ್ಚಿ ಪ್ರದೇಶಗಳಿಂದ ಏಕಕಾಲಕ್ಕೆ ಕಚೇರಿ ಆವರಣಕ್ಕೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರನ್ನು ಚುದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಲಾಠಿ ಪ್ರಹಾರ ನಡೆಸಿದರು.
 
ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು ಎಂದು ಆರೋಪಿಸಿದ ಪೊಲೀಸರು, ಸಂತರಗಚ್ಚಿ ಹಾಗೂ ಹೌರಾ ಪ್ರದೇಶದಲ್ಲಿ ಜಲಫಿರಂಗಿ ಬಳಸಿ ಜನರನ್ನು ಚದುರಿಸಿದರು.
 
ಪ್ರತಿಭಟನಾನಿರತ ಸಿಪಿಎಂ ಶಾಸಕರಾದ ಸುಜನ್ ಚಕ್ರವರ್ತಿ, ಅಶೋಕ್ ಭಟ್ಟಾಚಾರ್ಯ ಹಾಗೂ ತನ್ಮಯ ಭಟ್ಟಾಚಾರ್ಜಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.
 
ಮೂರು ಕಾರುಗಳಲ್ಲಿ ಹೊರಟ ಸಿಪಿಎಂ ನಾಯಕರು ಸಚಿವಾಲಯದ ಮೊದಲ ಭದ್ರತಾ ಹಂತ ದಾಟಿದರು. ಮುತ್ತಿಗೆ ಹಾಕುವ ಯತ್ನ ನಡೆಯುತ್ತಿದೆ ಎಂದು ಅರಿತ ಪೊಲೀಸರು ಇವರನ್ನು ಉತ್ತರ ದ್ವಾರದಲ್ಲಿ ತಡೆದರು. ಆಗ ಘರ್ಷಣೆ ನಡೆಯಿತು.
 
ಈ ವೇಳೆ ಕಚೇರಿಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇರಲಿಲ್ಲ. ಕಾರ್ಯಕ್ರಮ ನಿಮಿತ್ತ ಅವರು ಬಿರ್‌ಭುಮ್ ಜಿಲ್ಲೆಯ ಪ್ರವಾಸದಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.