ADVERTISEMENT

ಪ್ಯಾನ್‌–ಆಧಾರ್‌ ಜೋಡಣೆ ಜುಲೈ 1ರಿಂದ ಕಡ್ಡಾಯ

ಪಿಟಿಐ
Published 28 ಜೂನ್ 2017, 19:35 IST
Last Updated 28 ಜೂನ್ 2017, 19:35 IST
ಪ್ಯಾನ್‌–ಆಧಾರ್‌ ಜೋಡಣೆ ಜುಲೈ 1ರಿಂದ ಕಡ್ಡಾಯ
ಪ್ಯಾನ್‌–ಆಧಾರ್‌ ಜೋಡಣೆ ಜುಲೈ 1ರಿಂದ ಕಡ್ಡಾಯ   

ನವದೆಹಲಿ: ಪ್ಯಾನ್‌ (ಶಾಶ್ವತ ಖಾತೆ ಸಂಖ್ಯೆ) ಹೊಂದಿರುವವರು ಜುಲೈ 1ರಿಂದ ತಮ್ಮ ಆಧಾರ್‌ ಸಂಖ್ಯೆಗೆ ಅದನ್ನು ಜೋಡಿಸುವುದು ಕಡ್ಡಾಯ. ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದರ ಜೊತೆಗೆ, ಪ್ಯಾನ್‌ ಕಾರ್ಡ್‌ಗಾಗಿ ಅರ್ಜಿ ಹಾಕುವಾಗ, ಆದಾಯ ಲೆಕ್ಕಪತ್ರ ವಿವರ (ಐಟಿಆರ್‌) ಸಲ್ಲಿಸುವಾಗ ಮತ್ತು ನಿಗದಿತ ಮಿತಿಗಿಂತ ಹೆಚ್ಚಿನ ಮೊತ್ತದ ವ್ಯವಹಾರ ನಡೆಸುವಾಗ ಆಧಾರ್‌ ಸಂಖ್ಯೆ ಅಥವಾ ಆಧಾರ್‌ ನೋಂದಣಿ ಗುರುತು ಸಂಖ್ಯೆಯನ್ನು ಉಲ್ಲೇಖಿಸುವುದೂ ಕಡ್ಡಾಯ. 2017–18ನೇ ಸಾಲಿನ ಹಣಕಾಸು ಮಸೂದೆಯಲ್ಲಿ ತೆರಿಗೆ ಪ್ರಸ್ತಾವಗಳಿಗೆ ತಿದ್ದುಪಡಿ ಮೂಲಕ  ಪ್ಯಾನ್‌ಗೆ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT