ADVERTISEMENT

ಬಾಬರಿ ಮಸೀದಿ–ಹಿರಿಯ ಅರ್ಜಿದಾರ ಅನ್ಸಾರಿ ನಿಧನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST
ಬಾಬರಿ ಮಸೀದಿ–ಹಿರಿಯ ಅರ್ಜಿದಾರ ಅನ್ಸಾರಿ ನಿಧನ
ಬಾಬರಿ ಮಸೀದಿ–ಹಿರಿಯ ಅರ್ಜಿದಾರ ಅನ್ಸಾರಿ ನಿಧನ   

ಅಯೋಧ್ಯೆ, ಉತ್ತರ ಪ್ರದೇಶ(ಪಿಟಿಐ): ಬಾಬರಿ ಮಸೀದಿ–ರಾಮ ಜನ್ಮಭೂಮಿ ಪ್ರಕರಣದ ಹಿರಿಯ ಅರ್ಜಿದಾರ ಹಶಿಮ್‌ ಅನ್ಸಾರಿ ಬುಧವಾರ ನಿಧನರಾದರು.
95 ವರ್ಷದ  ಅನ್ಸಾರಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ತಂದೆಯವರು ಸ್ವಗೃಹದಲ್ಲೇ ಕೊನೆಯುಸಿರೆಳೆದರು ಎಂದು ಪುತ್ರ ಇಕ್ಬಾಲ್‌ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಜನಿಸಿದ ಅನ್ಸಾರಿ ಬಾಬರಿ ಮಸೀದಿ– ರಾಮಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಲಯದ ಮೆಟ್ಟಿಲೇರಿದವರಲ್ಲಿ ಮೊದಲಿಗರು. ಈ ಕುರಿತು ಅವರು 1949ರಲ್ಲಿ ಫೈಜಾಬಾದ್‌ ನ್ಯಾಯಾಲಯದಲ್ಲಿ ದೂರು   ದಾಖಲಿಸಿದ್ದರು.  ಅಯೋಧ್ಯೆ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿ ಫೈಜಾಬಾದ್‌ ಸಿವಿಲ್‌ ನ್ಯಾಯಾಲಯದಲ್ಲಿ ಸಲ್ಲಿಸಿದ ದೂರಿನಲ್ಲಿ ಹೆಸರಿಸಲಾಗಿದ್ದ ಪ್ರಮುಖ ಆರು ಪ್ರತಿವಾದಿಗಳಲ್ಲಿ ಅನ್ಸಾರಿ ಒಬ್ಬರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.