ADVERTISEMENT

ಬೃಹತ್ ಗಾತ್ರದ ಯೋಜನಾ ಅಂದಾಜು

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 12:29 IST
Last Updated 8 ಜುಲೈ 2014, 12:29 IST

ನವದೆಹಲಿ (ಪಿಟಿಐ): ರೈಲ್ವೆ ಇಲಾಖೆಗೆ ಸರ್ಕಾರವು 2014–15ನೇ ಸಾಲಿಗೆ 65,445 ಕೋಟಿ ರೂಪಾಯಿಗಳ ಯೋಜನಾ ವೆಚ್ಚ ಪ್ರಸ್ತಾಪಿಸಿದ್ದು, ರೈಲ್ವೆ ಇತಿಹಾಸದಲ್ಲೇ ಇದು ಬೃಹತ್‌ ಗಾತ್ರದ ಯೋಜನಾ ಅಂದಾಜು.

ಇದಕ್ಕೆ 30 ಸಾವಿರ ಕೋಟಿ ರೂಪಾಯಿಗಳ ಬೆಂಬಲವಿದೆ. ಮಾರುಕಟ್ಟೆ ಸಾಲದಿಂದ 11,790 ಕೋಟಿ ರೂಪಾಯಿ, ಆಂತರಿಕ ಸಂಪನ್ಮೂಲದಿಂದ 15,350 ಕೋಟಿ ಹಾಗೂ ಉಳಿದ 6,005 ಕೋಟಿ ರೂಪಾಯಿ ಸರ್ಕಾರಿ–ಖಾಸಗಿ ಪ್ರಾಯೋಜಕತ್ವದಿಂದ ದೊರೆಯಲಿದೆ.

2014–15ನೇ ಸಾಲಿನ ಬಜೆಟ್‌ ಅಂದಾಜಿನ ಪ್ರಕಾರ 1,64374 ಕೋಟಿ ರೂಪಾಯಿ ಆದಾಯ ಹಾಗೂ 1,49,176 ಕೋಟಿ ರೂಪಾಯಿ ವೆಚ್ಚ ನಿರೀಕ್ಷೆ ಇದೆ.

ADVERTISEMENT

2200 ಕೋಟಿ ರೂಪಾಯಿ ಮೊತ್ತದ ರೈಲ್ವೆ ಸುರಕ್ಷಾ ನಿಧಿ ಸ್ಥಾಪನೆಗೆ ಉದ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.