ADVERTISEMENT

ಬೇಹುಗಾರಿಕೆ ವಿಮಾನ ಪತನ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ಭುಜ್‌ (ಪಿಟಿಐ): ಭಾರತೀಯ ವಾಯು ಪಡೆಗೆ ಸೇರಿದ ಚಾಲಕ ರಹಿತ ‘ಹೆರನ್‌’ ಹೆಸರಿನ ಬೇಹು­ಗಾರಿಕೆ ವಿಮಾನ ಪಟ್ಟಣದ ಹೊರವಲ­ಯದಲ್ಲಿ ಬುಧ­ವಾರ ಪತನಗೊಂಡಿದೆ ರಕ್ಷಣಾ ಪಡೆಯ ಅಹಮದಾಬಾದ್‌ ಘಟಕದ ಸಾರ್ವ­ಜನಿಕ ಸಂಪರ್ಕಾಧಿಕಾರಿ ಅಭಿಷೇಕ್‌  ಹೇಳಿದ್ದಾರೆ.

ಈ ವಿಮಾನದ ಮೊತ್ತ ₨80 ಕೋಟಿ. ಪತನದ ಕಾರಣಗಳು ತನಿಖೆಯ ನಂತರ ಗೊತ್ತಾಗಲಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ  ಹಾನಿ ಸಂಭವಿಸಿಲ್ಲ ಎಂದು ಭುಜ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎನ್‌.­ಪಟೇಲ್‌ ಹೇಳಿದ್ದಾರೆ.  ಇಸ್ರೇಲ್‌ನಿಂದ ಈ ವಿಮಾನವನ್ನು ಖರೀದಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.