ADVERTISEMENT

ಬ್ಯಾಂಕ್‌ ದರೋಡೆಗೆ 25 ಅಡಿ ಸುರಂಗ ಕೊರೆದರು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 19:30 IST
Last Updated 13 ನವೆಂಬರ್ 2017, 19:30 IST
ಎಡ ಚಿತ್ರ– ಬ್ಯಾಂಕ್‌ ಲಾಕರ್‌ಗಳನ್ನು ಮುರಿದಿರುವುದು. ಬಲ ಚಿತ್ರ ಬ್ಯಾಂಕ್ ಸಮೀಪ ಸುರಂಗ ಕೊರೆದಿರುವುದು  ಪ್ರಜಾವಾಣಿ ಚಿತ್ರಗಳು
ಎಡ ಚಿತ್ರ– ಬ್ಯಾಂಕ್‌ ಲಾಕರ್‌ಗಳನ್ನು ಮುರಿದಿರುವುದು. ಬಲ ಚಿತ್ರ ಬ್ಯಾಂಕ್ ಸಮೀಪ ಸುರಂಗ ಕೊರೆದಿರುವುದು ಪ್ರಜಾವಾಣಿ ಚಿತ್ರಗಳು   

ಮುಂಬೈ: ನವಿ ಮುಂಬೈ ಉಪನಗರದ ಜೂಯಿ ನಗರ ಎಂಬಲ್ಲಿನ ಬ್ಯಾಂಕ್‌ ಆಫ್ ಬರೋಡದ ಶಾಖೆಯಲ್ಲಿ ದರೋಡೆ ಮಾಡಲು ಕಳ್ಳರು 25 ಅಡಿ ಉದ್ದದ ಸುರಂಗ ಕೊರೆದಿದ್ದಾರೆ.

ಬ್ಯಾಂಕ್‌ನಲ್ಲಿದ್ದ 225 ಲಾಕರ್‌ಗಳಲ್ಲಿ 25 ಲಾಕರ್‌ಗಳಲ್ಲಿ ಕಳುವಾಗಿದ್ದು, ಅದರಲ್ಲಿದ್ದ ವಸ್ತುಗಳ ಮೌಲ್ಯ ಎಷ್ಟು ಎಂಬುದು ತಿಳಿದು ಬಂದಿಲ್ಲ. ಈ ವಿಷಯ, ಸಿಬ್ಬಂದಿ ಸೋಮವಾರ ಬ್ಯಾಂಕ್‌ಗೆ ಬಂದಾಗಷ್ಟೇ ತಿಳಿದುಬಂದಿದೆ.

‘ಬ್ಯಾಂಕ್‌ ಸಮೀಪದ ಕೋಣೆಯನ್ನು ಆರೋ‍ಪಿಗಳು ಮೇ ತಿಂಗಳಲ್ಲಿ ಬಾಡಿಗೆಗೆ ಪಡೆದಿದ್ದರು. ಅಲ್ಲಿಂದಲೇ ಲಾಕರ್‌ ಇದ್ದ ಸ್ಥಳದವರೆಗೆ ಸುರಂಗ ಕೊರೆದಿದ್ದಾರೆ’ ಎಂದು ನವಿ ಮುಂಬೈ ಪೊಲೀಸ್ ಆಯುಕ್ತ ಹೇಮಂತ್‌ ನಾಗರಾಳೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.