ADVERTISEMENT

ಬ್ಲೂವೇಲ್‌ ಆತಂಕ ಸಿಬಿಎಸ್‌ಇ ಮಾರ್ಗದರ್ಶಿಸೂತ್ರ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 20:01 IST
Last Updated 23 ಆಗಸ್ಟ್ 2017, 20:01 IST
ಬ್ಲೂವೇಲ್‌ ಆತಂಕ ಸಿಬಿಎಸ್‌ಇ ಮಾರ್ಗದರ್ಶಿಸೂತ್ರ
ಬ್ಲೂವೇಲ್‌ ಆತಂಕ ಸಿಬಿಎಸ್‌ಇ ಮಾರ್ಗದರ್ಶಿಸೂತ್ರ   

ನವದೆಹಲಿ: ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಪ್ರೇರಣೆ ನೀಡುವ ‘ಬ್ಲೂವೇಲ್‌ ಚ್ಯಾಲೆಂಜ್‌’ ಬಗ್ಗೆ ದೇಶದಾದ್ಯಂತ ಪೋಷಕರು ಆತಂಕಗೊಂಡಿರುವುದರ ನಡುವೆಯೇ, ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಎಲ್ಲ ಶಾಲೆಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಕಳುಹಿಸಿದೆ.

ವಿದ್ಯಾರ್ಥಿಗಳು ಸುರಕ್ಷಿತವಾಗಿ ಇಂಟರ್‌ನೆಟ್ ಬಳಸುವಂತೆ ಮಾಡಲು ಡಿಜಿಟಲ್‌ ನಿಗಾ ವ್ಯವಸ್ಥೆಯನ್ನು ಅಳವಡಿಸುವಂತೆ ಅದು ತನ್ನ ಅಧೀನದ ಶಾಲೆಗಳಿಗೆ ಸೂಚಿಸಿದೆ.

ಇಂಟರ್‌ನೆಟ್‌ ಬಳಸುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳುವಂತೆ ಮತ್ತು ಶಾಲಾ ಆವರಣದಲ್ಲಿ ಅವುಗಳನ್ನು ಪ್ರಮುಖವಾಗಿ ಪ್ರದರ್ಶಿಸುವಂತೆ ಸಿಬಿಎಸ್‌ಇ ಸಲಹೆ ನೀಡಿದೆ.

ADVERTISEMENT

ಮಕ್ಕಳ ಸುರಕ್ಷತೆಗಾಗಿ ಶಾಲೆಗಳ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವೈಯಕ್ತಿಕ ಚಿತ್ರಗಳು ಅಥವಾ ವಿಡಿಯೊಗಳನ್ನು ಹಾಕದಂತೆಯೂ ಅದು ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.