ADVERTISEMENT

ಭದ್ರತಾ ಪಡೆ ಗುಂಡಿಗೆ ಪಾಕಿಸ್ತಾನ ಉಗ್ರ ಬಲಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2014, 19:30 IST
Last Updated 23 ಜೂನ್ 2014, 19:30 IST

ಶ್ರೀನಗರ (ಪಿಟಿಐ): ಉತ್ತರ ಕಾಶ್ಮೀ­ರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರ­ತಾ­­ಪಡೆ­ಯೊಂದಿಗೆ ನಡೆದ  ಗುಂಡಿನ ಕಾಳಗ­ದಲ್ಲಿ ಲಷ್ಕರ್‌ ಎ ತಯ್ಯ­ಬಾದ (ಎಲ್‌ಇಟಿ) ಪಾಕಿಸ್ತಾನಿ ಕಮಾಂಡರ್‌ ಮೆಹಮೂದ್‌ ಭಾಯ್‌ ಮೃತಪಟ್ಟಿದ್ದಾಗಿ ಸೇನಾ ವಕ್ತಾರರು ತಿಳಿಸಿದ್ದಾರೆ.

ಸೊಪೋರ್‌ನ ತರ್ಜೂ ಗ್ರಾಮದಲ್ಲಿ ಭಾನುವಾರ ಸಂಜೆ ಉಗ್ರರು ಭದ್ರತಾ ಪಡೆಯತ್ತ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಸಿಬ್ಬಂದಿ ಕೂಡ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.

‘ಉಗ್ರರು ತಪ್ಪಿಸಿಕೊಳ್ಳದಂತೆ ಈ ಪ್ರದೇಶ­ದಲ್ಲಿ ಬಿಗಿ ಕಾವಲು ಹಾಕ­ಲಾಗಿತ್ತು. ಸೋಮವಾರ ಮಧ್ಯಾಹ್ನ ಸುಮಾರು ಎರಡು ಗಂಟೆ ಹೊತ್ತಿಗೆ ಮೆಹ­ಮೂದ್‌ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ಆಗ ಗುಂಡಿನ ದಾಳಿಗೆ ಮೃತಪಟ್ಟ’ ಎಂದು ವಕ್ತಾರರು ಹೇಳಿದ್ದಾರೆ.

ಸ್ಥಳದಲ್ಲಿ ಇಬ್ಬರು ಉಗ್ರರು  ಇದ್ದರು ಎನ್ನಲಾಗಿತ್ತು. ಆದರೆ ಒಬ್ಬನ ಮೃತ­ದೇಹ ಮಾತ್ರ ಪತ್ತೆಯಾಗಿದೆ. ಇನ್ನೊಬ್ಬ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕಾಶ್ಮೀರದಲ್ಲಿ ಕಳೆದ ವಾರ ನಡೆದ ಎರಡು ಯಶಸ್ವಿ ಕಾರ್ಯಾಚರ­ಣೆಗಳ ಬೆನ್ನಲ್ಲಿಯೇ ಮೆಹಮೂದ್‌ ಹತ್ಯೆಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.