ADVERTISEMENT

ಭಾರತದ ಯುವತಿಗೆ ‘ಗ್ರೀನ್‌ ಆಸ್ಕರ್‌’

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2014, 19:30 IST
Last Updated 25 ಅಕ್ಟೋಬರ್ 2014, 19:30 IST

ಕೋಲ್ಕತ್ತ (ಐಎಎನ್‌ಎಸ್‌): ನ್ಯೂಜಿಲೆಂಡ್‌ನಲ್ಲಿ ಕಾಣಸಿಗುವ ನಿಶಾಚರಿ ಗಿಳಿಯ ಕುರಿತು ಸಾಕ್ಷ್ಯಚಿತ್ರ   ನಿರ್ಮಿಸಿದ ಪಶ್ಚಿಮ ಬಂಗಾಳ ಮೂಲದ ವಿಜ್ಞಾನ ಮತ್ತು ಇತಿಹಾಸ ಚಿತ್ರ ನಿರ್ದೇಶಕಿ ಅಶ್ವಿಕಾ ಕಪೂರ್‌ (26)  ‘ಗ್ರೀನ್ ಆಸ್ಕರ್‌’ ಎಂದೇ ಕರೆಯಲಾಗುವ ‘ಪಾಂಡಾ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.

ಬ್ರಿಟನ್‌ನ ಬ್ರಿಸ್ಟಲ್‌ ನಗರದಲ್ಲಿ ಶುಕ್ರವಾರ ನಡೆದ ‘ವೈಲ್ಡ್‌­ಸ್ಕ್ರೀನ್‌ ಫೆಸ್ಟಿವಲ್‌‘ನಲ್ಲಿ ಅಶ್ವಿಕಾ  ಪ್ರಶಸ್ತಿ ಸ್ವೀಕರಿಸಿದರು. ‘ಸಿರಾಕೋ ಹೌ ಎ ಡಡ್‌ ಬಿಕೇಮ್‌ ಎ ಸ್ಟಡ್‌’  ಶೀರ್ಷಿಕೆಯ 15 ನಿಮಿಷಗಳ  ಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿದೆ. ಕೋಲ್ಕತ್ತದಲ್ಲಿ ಆರಂಭದ ಶಿಕ್ಷಣ ಪೂರೈಸಿದ್ದ ಅಶ್ವಿಕಾ, ನ್ಯೂಜಿಲೆಂಡ್‌ ಮ ಒಟಾಗೊ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಮತ್ತು ನೈಸರ್ಗಿಕ ಇತಿಹಾಸ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಗ್ರೀನ್‌ ಆಸ್ಕರ್‌ ಗೌರವಕ್ಕೆ ಪಾತ್ರರಾದ ಭಾರತದ ಅತ್ಯಂತ ಕಿರಿಯ ವಯಸ್ಸಿನ ಹೆಣ್ಣುಮಗಳು ಎಂಬ ಹೆಗ್ಗಳಿಕೆಗೆ ಅಶ್ವಿಕಾ ಪಾತ್ರರಾಗಿದ್ದಾರೆ. 42 ದೇಶಗಳ 488 ಪ್ರವೇಶಗಳು ಈ ಚಿತ್ರೋತ್ಸವಕ್ಕೆ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.