ADVERTISEMENT

ಭಾರತೀಯರನ್ನು ಕರೆತರಲು ಯೆಮನ್‌ಗೆ ಏರ್‌ಇಂಡಿಯಾ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 5:50 IST
Last Updated 30 ಮಾರ್ಚ್ 2015, 5:50 IST

ನವದೆಹಲಿ (ಪಿಟಿಐ): ಹಿಂಸಾಚಾರ ಪೀಡಿತ ಯೆಮನ್‌ನಲ್ಲಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಾವಿರಾರು ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಸೋಮವಾರ ಬೆಳಿಗ್ಗೆ ಏರ್‌ಇಂಡಿಯಾ ವಿಮಾನವನ್ನು ಕಳುಹಿಸಲಾಗಿದೆ.

180 ಆಸನಗಳ ಸಾಮರ್ಥ್ಯವುಳ್ಳ ಏರ್‌ಬಸ್‌ ಎ320 ವಿಮಾನವು ದೆಹಲಿಯಿಂದ ಸೋಮವಾರ ಬೆಳಿಗ್ಗೆ 7:45ಕ್ಕೆ  ಹೊರಟಿತು. ಮಸ್ಕತ್‌ ಮಾರ್ಗವಾಗಿ ಈ ವಿಮಾನವು ಯೆಮನ್‌ ರಾಜಧಾನಿ ‘ಸಾನಾ’ವನ್ನು ತಲುಪಲಿದ್ದು, ಅಲ್ಲಿಂದ ಸಂಜೆ ಮರಳಿ ನವದೆಹಲಿಗೆ ಹಾರಲಿದೆ. ಯೆಮನ್‌ನಲ್ಲಿ ಸುಮಾರು 3,500 ಭಾರತೀಯರು ತೊಂದರೆಯಲ್ಲಿ ಸಿಲುಕಿದ್ದಾರೆ. ಇವರಲ್ಲಿ ಹೆಚ್ಚಿನವರು ದಾದಿಯರು.

ಯೆಮನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗಾಗಿ ವಿಮಾನ ವ್ಯವಸ್ಥೆ ಮಾಡುವುದಾಗಿ ಸರ್ಕಾರ ಭಾನುವಾರ ಹೇಳಿತ್ತು.  ಈ ಸಂಬಂಧ ಏರ್‌ ಇಂಡಿಯಾದೊಂದಿಗೆ ಮಾತುಕತೆ ನಡೆಸಲಾಗಿದ್ದು, ಪರವಾನಗಿ ಲಭಿಸಿದೆ.  ವಿಮಾನ ಸಾನಾಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ.

ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎರಡು ಹಡಗುಗಳನ್ನೂ ಯೆಮನ್‌ನ ಡಿಜಿಬೋಟಿ ಬಂದರಿಗೆ ಕಳುಹಿಸಲಾಗಿದೆ ಎಂದು ಕೊಚ್ಚಿನ್‌ ಬಂದರು ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT