ADVERTISEMENT

ಭಾರತ ಪ್ರವಾಸ ಮುಗಿಸಿ, ಸೌದಿಗೆ ಪ್ರಯಾಣಿಸಿದ ಒಬಾಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 10:35 IST
Last Updated 27 ಜನವರಿ 2015, 10:35 IST

ನವದೆಹಲಿ(ಪಿಟಿಐ): ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಮೂರು ದಿನಗಳ ಭಾರತ ಪ್ರವಾಸ ಮುಗಿಸಿ, ಮಂಗಳವಾರ ಇಲ್ಲಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದರು.

ಸೌದಿ ದೊರೆ ಅಬ್ದುಲ್ಲಾ ಬಿನ್‌ ಅಬ್ದುಲ್‌ ಅಜೀಜ್‌ ನಿಧನರಾಗಿದ್ದು, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಒಬಾಮ, ಪತ್ನಿ ಮಿಷೆಲ್ ಜತೆಗೂಡಿ ಸೌದಿಗೆ ಭೇಟಿ ನೀಡುತ್ತಿದ್ದಾರೆ.

ಅಮೆರಿಕದ ವಾಯುಪಡೆಗೆ ಸೇರಿದ  ವಿಶೇಷ ವಿಮಾನದಲ್ಲಿ ಮಧ್ಯಾಹ್ನ 1.55ಕ್ಕೆ ಅವರು ಪ್ರಯಾಣ ಬೆಳೆಸಿದರು.

ಕೈ ಮುಗಿದ ದಂಪತಿ: ವಿಮಾನದ ಒಳ ಪ್ರವೇಶಿಸುವುದಕ್ಕೂ ಮುನ್ನ ಬಾಗಿಲ ಬಳಿ ತಿರುಗಿ ನಿಂತ ಒಬಾಮ ದಂಪತಿ ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ಬಂದಿದ್ದವರಿಗೆ ಕೈಮುಗಿದು ಧನ್ಯವಾದ ಸಲ್ಲಿಸಿದರು.

‘ನಮ್ಮ ಆಮಂತ್ರಣ ಗೌರವಿಸಿ ಆಗಮಿಸಿದ್ದಕ್ಕೆ ಅಭಿನಂದನೆ. ನಿಮ್ಮ ಭೇಟಿಯಿಂದ ಭಾರತ-–ಅಮೆರಿಕ ನಡುವಿನ ದ್ವಿಪಕ್ಷೀಯ  ಬಾಂಧವ್ಯದ ಹೊಸ ಅಧ್ಯಾಯ ಪ್ರಾರಂಭವಾಗಿದೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

‘ಭಾರತ ಭೇಟಿಯನ್ನು ಸ್ಮರಣೀಯವಾಗಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ, ಸಮಸ್ತ ಭಾರತೀಯರಿಗೆ ಧನ್ಯವಾದಗಳು’ ಎಂದು ಒಬಾಮ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT