ADVERTISEMENT

ಮತ್ತೆ ಮರುಕಳಿಸಿದ ಶಿಶುಗಳ ಸಾವಿನ ಭೂತ!

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2014, 8:24 IST
Last Updated 23 ಅಕ್ಟೋಬರ್ 2014, 8:24 IST

ಮಾಲ್ಡಾ, ಪಶ್ಚಿಮ ಬಂಗಾಳ (ಪಿಟಿಐ): ಪಶ್ಚಿಮ ಬಂಗಾಳದ ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಲ್ಲಿ ಹನ್ನೊಂದು ಶಿಶುಗಳು ಸಾವನ್ನಪ್ಪಿದ್ದು, ನವಜಾತ ಶಿಶುಗಳ ಮರಣದ ಭೀತಿ ಮತ್ತೆ ಆವರಿಸಿದೆ.

‘ಸೋಮವಾರ ಹಾಗೂ ಮಂಗಳವಾರ ಎಂಟು ಮತ್ತು ಕಳೆದ 24 ಗಂಟೆಗಳಲ್ಲಿ ಮೂರು ಶಿಶುಗಳು ಸಾವನ್ನಪ್ಪಿವೆ. ಮೃತ ಶಿಶುಗಳು ಒಂದು ರಿಂದ 30 ದಿನಗಳ ಒಳಗಿನ ವಯಸ್ಸಿನವು’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಹಾಗೂ ಉಪ ಪ್ರಾಂಶುಪಾಲರಾಗಿರುವ ಎಂ.ಎ.ರಶೀದ್‌ ಅವರು ಗುರುವಾರ ತಿಳಿಸಿದ್ದಾರೆ.

‘ಎಲ್ಲಾ ಶಿಶುಗಳು ಗಣನೀಯವಾದ ತೂಕದ ಕೊರತೆ ಹಾಗೂ ಅಪೌಷ್ಠಿಕತೆಯ ಜತೆಗೆ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದವು’ ಎಂದೂ ಅವರು ತಿಳಿಸಿದ್ದಾರೆ.

ಸಾವೀಗಿಡಾದ ಬಹುತೇಕ ಮಕ್ಕಳು ಮಾಲ್ಡಾ ಜಿಲ್ಲೆಯ ಕಾಲಿಯಾಚಕ್‌ ಹಾಗೂ ಇತರ ಪ್ರದೇಶಗಳಿಂದ ಸ್ಥಳೀಯ ಆಸ್ಪತ್ರೆಗಳ ಶಿಫಾರಸಿನ ಮೇರೆಗೆ ತರಲಾಗಿತ್ತು.

ADVERTISEMENT

ಕಳೆದ ವರ್ಷವೂ ಶಿಶು ಮರಣದಿಂದ ಈ ಆಸ್ಪತ್ರೆಯು ದೇಶದ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.