ADVERTISEMENT

ಮದರಸಾ ಪರೀಕ್ಷೆಯಲ್ಲಿ ಹಿಂದೂ ಹುಡುಗಿಗೆ 8ನೇ ರ‍್ಯಾಂಕ್‌

​ಪ್ರಜಾವಾಣಿ ವಾರ್ತೆ
Published 17 ಮೇ 2017, 12:52 IST
Last Updated 17 ಮೇ 2017, 12:52 IST
ಪ್ರಶಮಾ
ಪ್ರಶಮಾ   

ಕೊಲ್ಕತ್ತಾ: ಪಶ್ಚಿಮ ಬಂಗಾಳ ಪರೀಕ್ಷಾ ಮಂಡಳಿಯ ಮದರಸಾ ಪರೀಕ್ಷೆಯಲ್ಲಿ 16ರ ಹರೆಯದ ಹಿಂದೂ ವಿದ್ಯಾರ್ಥಿನಿ 8ನೇ ರ‍್ಯಾಂಕ್‌ ಪಡೆದಿದ್ದಾಳೆ.

ಹೌರಾ ಜಿಲ್ಲೆಯ ಖಲಾತ್‍ಪುರ್ ಹೈ ಮದರಸಾದಲ್ಲಿ ಕಲಿಯುತ್ತಿರುವ ಪ್ರಶಮಾ ಸಸ್ಮಾಲ್ ಎಂಬ ವಿದ್ಯಾರ್ಥಿನಿ 10ನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ 8ನೇ ರ‍್ಯಾಂಕ್‌ ಪಡೆದಿದ್ದಾಳೆ.

800 ಅಂಕಗಳ ಪರೀಕ್ಷೆಯಲ್ಲಿ ಪ್ರಶಮಾ 729 ಅಂಕಗಳನ್ನು (ಶೇ.91.9) ಗಳಿಸಿದ್ದಾಳೆ . ತನ್ನ ಸಾಧನೆ ಬಗ್ಗೆ ದ ಹಿಂದು ಪತ್ರಿಕೆಯೊಂದಿಗೆ ಮಾತನಾಡಿದ ಈಕೆ, ನನ್ನ ಅಪ್ಪನಿಗೆ ಮದರಸಾದಲ್ಲಿ ಕಲಿಸುತ್ತಿರುವ ಶಿಕ್ಷಕರು ಪರಿಚಿತರಾಗಿದ್ದರು. ಮದರಸಾ ನಮ್ಮ ಮನೆ ಪಕ್ಕದಲ್ಲೇ ಇತ್ತು. ಹಾಗಾಗಿ ನನ್ನನ್ನು ಅಲ್ಲಿಗೆ ಸೇರಿಸಲಾಯಿತು. ನನ್ನ ಶಿಕ್ಷಕರು ನನಗೆ ತುಂಬಾ ಸಹಾಯ ಮಾಡಿದ್ದಾರೆ. ನಾನು ಇದೇ ಶಾಲೆಯಲ್ಲಿ 12ನೇ ತರಗತಿವರೆಗೆ ಕಲಿಯಲು ಇಚ್ಛಿಸುತ್ತೇನೆ ಎಂದಿದ್ದಾಳೆ.

ADVERTISEMENT

ಪ್ರಶಮಾ ಅವರ ಅಪ್ಪ ಸ್ಥಳೀಯ ಪಂಚಾಯತ್ ಅಧಿಕಾರಿಯಾಗಿದ್ದಾರೆ.

ಇತರ ವಿಷಯಗಳೊಂದಿಗೆ ಇಸ್ಲಾಂ ಪರಿಚಯ್ ಮತ್ತು ಅರೇಬಿಕ್ ವಿಷಯವನ್ನು ಇಲ್ಲಿ ಕಲಿಯಬೇಕಾಗುತ್ತದೆ. ಈ ವಿಷಯಗಳ ಬಗ್ಗೆ ನನ್ನ ಕುಟುಂಬದವರಿಗೆ ಯಾರಿಗೂ ಗೊತ್ತಿಲ್ಲ. ಇಲ್ಲಿಯವರೆಗೆ ನನಗೆ ಅಂಕ ಪಟ್ಟಿ  ಕೈಸೇರಿಲ್ಲ.ಆದರೆ ನನಗೆ ಇಸ್ಲಾಂ ಪರಿಚಯ್ ನಲ್ಲಿ 97 ಅಂಕ ಮತ್ತು ಅರೇಬಿಕ್‍ನಲ್ಲಿ 64 ಅಂಕಗಳು ಸಿಕ್ಕಿವೆ. ನನ್ನ ತಮ್ಮ ಪ್ರಮಿತ್ ಕೂಡಾ ಇದೇ ಮದರಸಾದಲ್ಲಿ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.

2017ನೇ ಸಾಲಿನ ಪರೀಕ್ಷೆಯಲ್ಲಿ 2, 287 ಮಸ್ಲಿಮೇತರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟು 52,115  ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದು ಇದರಲ್ಲಿ ಶೇ. 4.3ರಷ್ಟು ಮಾತ್ರ ಮುಸ್ಲಿಮೇತರ ವಿದ್ಯಾರ್ಥಿಗಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.