ADVERTISEMENT

ಮದ್ಯ, ಮೊಬೈಲ್ ಖರೀದಿಸಲು ಮಗುವನ್ನೇ ಮಾರಿದ ಅಪ್ಪ!

ಪಿಟಿಐ
Published 13 ಸೆಪ್ಟೆಂಬರ್ 2017, 17:51 IST
Last Updated 13 ಸೆಪ್ಟೆಂಬರ್ 2017, 17:51 IST
ಚಿತ್ರ ಕೃಪೆ – ಎಎನ್‌ಐ
ಚಿತ್ರ ಕೃಪೆ – ಎಎನ್‌ಐ   

ಭುವನೇಶ್ವರ: ಮೊಬೈಲ್‌ಫೋನ್, ಒಡವೆ, ವಸ್ತ್ರ ಖರೀದಿಸುವ ಸಲುವಾಗಿ ಭದ್ರಕ್‌ ಜಿಲ್ಲೆಯ ಬಲರಾಮ್ ಮುಖಿ ಎಂಬ ವ್ಯಕ್ತಿ ತನ್ನ 11 ತಿಂಗಳ ಮಗುವನ್ನೇ ₹ 25,000ಕ್ಕೆ ಇತ್ತೀಚೆಗೆ ಮಾರಾಟ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಹೀಗೆ ಬಂದ ಹಣದಲ್ಲಿ ಆತ ₹2,000ದಲ್ಲಿ ಮೊಬೈಲ್‌ಫೋನ್, ₹ 1,500ರಲ್ಲಿ ತನ್ನ ಏಳು ವರ್ಷದ ಮಗಳಿಗೆ ಬೆಳ್ಳಿಯ ಕಡಗ ಮತ್ತು ಪತ್ನಿಗೆ ಸೀರೆ ಖರೀದಿಸಿದ್ದ. ಉಳಿದ ಹಣವನ್ನು ಮದ್ಯ ಸೇವನೆಗೆ ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

’24 ವರ್ಷದ ಮಗನನ್ನು ಅಪಘಾತದಲ್ಲಿ ಕಳೆದುಕೊಂಡಿರುವ ವೃದ್ಧ ದಂಪತಿಗೆ ಮಗುವನ್ನು ಮಾರಾಟ ಮಾಡಲಾಗಿದೆ. ಈ ಕೃತ್ಯದಲ್ಲಿ ಆರೋಪಿಗೆ ಆತನ ಭಾವ ಮೈದುನ ಮತ್ತು ಅಂಗನವಾಡಿ ಕಾರ್ಯಕರ್ತ ಸಹಾಯ ಮಾಡಿರುವ ಶಂಕೆ ಇದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮಗು ಅಕ್ರಮ ಸಂಬಂಧಕ್ಕೆ ಹುಟ್ಟಿದೆ ಎಂದು ಶಂಕಿಸುತ್ತಿದ್ದ ಪತಿ ತನ್ನೊಂದಿಗೆ ಜಗಳವಾಡಿ ಬಲವಂತವಾಗಿ ಮಗುವನ್ನು ಕೊಂಡೊಯ್ದಿದ್ದಾಗಿ ಆತನ ಪತ್ನಿ ಬರ್ಶಾ ಮುಖಿ ಪೊಲೀಸರಿಗೆ ತಿಳಿಸಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.