ADVERTISEMENT

ಮರುಮತಾಂತರದಲ್ಲಿ ತಪ್ಪೇನಿಲ್ಲ: ಶಿವಸೇನಾ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 10:19 IST
Last Updated 22 ಡಿಸೆಂಬರ್ 2014, 10:19 IST

ಮುಂಬೈ (ಪಿಟಿಐ): ಮರು ಮತಾಂತರದಲ್ಲಿ ತಪ್ಪೇನೂ ಇಲ್ಲ ಎಂದು  ಬಿಜೆಪಿ ಅಂಗ ಪಕ್ಷ ಶಿವಸೇನಾ ಸೋಮವಾರ ಹೇಳಿದೆ.

‘ನಿನ್ನೆಯವೆರಗೂ ಹಿಂದೂಗಳನ್ನು ಮುಸ್ಲಿಮರಾಗಿ ಮತಾಂತರಿಸಲಾಗುತ್ತಿತ್ತು. ಅದು ಬಲವಂತದ ಅಥವಾ ಆಮೀಷ ಒಡ್ಡಿ ಮಾಡಲಾದ ಮತಾಂತರ ಎಂದು ಆಗ ಯಾರೋಬ್ಬರು ಹೇಳಲಿಲ್ಲ. ಆದರೆ ಮರುಮತಾಂತರ ಆರಂಭಿಸಿದಾಗ ಮತಾಂತರ ಹಕ್ಕಲ್ಲ ಎಂದು ಕಪಟ ಜ್ಯಾತ್ಯತೀತವಾದಿಗಳು ಹೇಳುತ್ತಿದ್ದಾರೆ’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಅಲ್ಲದೇ, ‘ಮೊಘಲರ ಆಡಳಿತಾವಧಿಯಲ್ಲಿ ಹಿಂದೂಗಳನ್ನು ಬಲವಂತದಿಂದ ಮುಸ್ಲಿಮರನ್ನಾಗಿ, ಬ್ರಿಟಿಷ್‌ ಹಾಗೂ ಪೋರ್ಚುಗೀಸ್‌ರ ಆಡಳಿತಾವಧಿಯಲ್ಲಿ ಕೈಸ್ತರನ್ನಾಗಿ ಮಾಡಿದ ಮತಾಂತರದ ಬಗ್ಗೆ ಈ ಜ್ಯಾತ್ಯತೀತವಾದಿ ಜನರು ಏನು ಹೇಳುತ್ತಾರೆ’ ಎಂದು ಸಂಪಾದಕೀಯದಲ್ಲಿ ಶಿವಸೇನಾ ಪ್ರಶ್ನಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.