ADVERTISEMENT

ಮಹಾರಾಷ್ಟ್ರ: ಲಘು ಭೂಕಂಪನ

​ಪ್ರಜಾವಾಣಿ ವಾರ್ತೆ
Published 20 ಮೇ 2016, 9:07 IST
Last Updated 20 ಮೇ 2016, 9:07 IST
ಮಹಾರಾಷ್ಟ್ರ: ಲಘು ಭೂಕಂಪನ
ಮಹಾರಾಷ್ಟ್ರ: ಲಘು ಭೂಕಂಪನ   

ನವದೆಹಲಿ(ಪಿಟಿಐ): ಮಹಾರಾಷ್ಟ್ರದ ಕೊಯ್ನ ಪ್ರದೇಶದಲ್ಲಿ ಶುಕ್ರವಾರ ಲಘು ಭೂಕಂಪನ ಉಂಟಾಗಿದೆ. ತಕ್ಷಣಕ್ಕೆ ಯಾವುದೇ ಹಾನಿ ಹಾಗೂ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಬೆಳಿಗ್ಗೆ 11.37ಕ್ಕೆ ಕಂಪನ ಉಂಟಾಗಿದ್ದು, ರಿಕ್ಟರ್‌ ಮಾಪಕದಲ್ಲಿ 3.5ರಷ್ಟು ತೀವ್ರತೆ ದಾಖಲಾಗಿದೆ. ಕಂಪನದ ಕೇಂದ್ರ ಬಿಂದು 15 ಕಿ.ಮೀ. ಭೂಮಿಯಾಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ ತಿಳಿಸಿದೆ.

ಮಹಾರಾಷ್ಟ್ರದ ಕೊಯ್ನ ಭೂಕಂಪ ವಲಯ ಹೊಂದಿದ್ದು, ಗುರುವಾರ ಎರಡು ಬಾರಿ ಭೂಮಿ ಕಂಪಿಸಿದೆ. ರಿಕ್ಟರ್‌ ಮಾಪಕದಲ್ಲಿ 3.7 ಹಾಗೂ 3.9ರಷ್ಟು ತೀವ್ರತೆ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.