ADVERTISEMENT

ಮಹಿಳಾ ಶಕ್ತಿ ಗೌರವಿಸಿ

ಹೆಣ್ಣು­ಮಗುವಿನ ಬದುಕು ಅಮೂಲ್ಯ­: ಒಬಾಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2015, 19:30 IST
Last Updated 27 ಜನವರಿ 2015, 19:30 IST

ನವದೆಹಲಿ (ಪಿಟಿಐ): ‘ಸದ್ಯದ ವಿಶ್ವ ಅರ್ಥ ವ್ಯವಸ್ಥೆ­ಯಲ್ಲಿ ದೇಶಗಳು ನಿಜ­ವಾಗಿಯೂ ಸಾಧನೆ ಮಾಡಲು ಬಯಸಿದಲ್ಲಿ ಅವು ಮಹಿಳೆ­ಯರ ಸಾಮರ್ಥ್ಯ­ವನ್ನು ಕಡೆಗಣಿ­ಸಲು ಸಾಧ್ಯವೇ ಇಲ್ಲ’ ಎಂದು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ.

ಭಾರತ ಭೇಟಿಯ ಕೊನೆಯ ದಿನ­ವಾದ ಮಂಗಳ­ವಾರ ರಿಯಾದ್‌ಗೆ ತೆರ­ಳುವ ಮುನ್ನ ಇಲ್ಲಿನ ಸಿರಿಫೋರ್ಟ್‌ ಸಭಾಂ­ಗ­ಣದಲ್ಲಿ ಮಾತನಾಡಿದ ಅವರು, ಮಹಿಳೆಯರು ಯಶ ಸಾಧಿಸಿ­ದರೆ ಮಾತ್ರ ದೇಶಗಳು ಯಶಸ್ಸು ಕಾಣಲು ಸಾಧ್ಯ ಎಂದರು.

‘ಭಾರತದ ಸೇನಾಪಡೆಯಲ್ಲಿ  ಅಸಾ­ಧಾರಣ ಮಹಿಳೆಯರು ಇದ್ದಾರೆ. ರಾಷ್ಟ್ರ­ಪತಿ ಭವನದಲ್ಲಿ ನನಗೆ ಮಹಿಳಾ ಕಮಾಂಡರ್‌ ಗೌರವ ವಂದನೆ ಸಲ್ಲಿ­ಸಿದ್ದು ಮರೆಯಲಾಗದ ಕ್ಷಣ. ಇದು ಸಾಮರ್ಥ್ಯ, ಪ್ರಗತಿಯ ಮಹಾನ್‌ ದ್ಯೋತಕ’ ಎಂದು ಬಣ್ಣಿಸಿದರು.

‘ಹೆಣ್ಣು­ಮಕ್ಕ­ಳಿಗೂ ಸಮಾನ ಅವಕಾಶ ಸಿಗಬೇಕು. ಪ್ರತಿ ಮಹಿಳೆಯೂ ರಸ್ತೆಯಲ್ಲಿ ಹಾಗೂ ಬಸ್‌ನಲ್ಲಿ ನಿರಾ­ತಂಕ­ವಾಗಿ ಓಡಾಡು­ವಂತೆ

‘ಅಮೆರಿಕ ಕುತಂತ್ರ’

ಬೀಜಿಂಗ್‌ (ಪಿಟಿಐ): ಭಾರತವು ಚೀನಾ ಮತ್ತು ರಷ್ಯಾ­ದೊಂದಿಗೆ ಹೊಂದಿ­ರುವ ಸಂಬಂಧದಲ್ಲಿ ಒಡಕು ಮೂಡಿ­ಸಲು ಅಮೆರಿಕ ಕುತಂತ್ರ ಮಾಡುತ್ತಿದೆ. 

ಅಮೆರಿಕದೊಂದಿಗೆ ಚೀನಾ ಸಂಬಂಧ ಉತ್ತಮ­ವಾಗಿಲ್ಲ. ಭಾರತ­­­­ವನ್ನು ಗಾಳ­ವಾಗಿ ಬಳಸಿ­ಕೊಂಡು ಚೀನಾಗೆ ಕಿರುಕುಳ ನೀಡುವ ಉದ್ದೇಶ­ವನ್ನು ಅಮೆರಿಕ ಹೊಂದಿದೆ.ಒಬಾಮ ಅವರ ಕಾರ್ಯತಂತ್ರ ಸ್ಪಷ್ಟವಾಗಿದೆ ಎಂದು ಪ್ರಾಧ್ಯಾಪಕ ಝೌ ಫಾಂಗ್‌­­ಯಿನ್‌ ತಿಳಿಸಿ­ರುವುದಾಗಿ ಚೀನಾದ ಸರ್ಕಾರಿ ಮಾಧ್ಯಮ­ವೊಂದು ಉಲ್ಲೇಖಿಸಿದೆ.

ಪುಟಿನ್‌ಗೆ ಆಹ್ವಾನ?
ಗಣ­ರಾಜ್ಯೋತ್ಸವ ಪರೇಡ್‌ಗೆ ಭಾರತ ಒಬಾಮ ಅವರನ್ನು  ಆಹ್ವಾನಿಸಿದ ಬೆನ್ನಲ್ಲಿಯೇ ಚೀನಾ ಸಹ ಬೃಹತ್‌ ಸೇನಾ ಕಾರ್ಯ­ಕ್ರಮ ಮಾಡಲು ಉದ್ದೇಶಿಸಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಅತಿಥಿಯಾಗಿ ಆಹ್ವಾನಿಸಲಿದೆ.

ಮಹತ್ವದ ಪಾತ್ರ
ದಕ್ಷಿಣ ಚೀನಾ  ಸಮುದ್ರದ ಮೇಲೆ ಹಿಡಿತ ಸಾಧಿಸಲು ಚೀನಾ ಯತ್ನಿಸು­ತ್ತಿರುವ ಹೊತ್ತಿನಲ್ಲಿಯೇ ಒಬಾಮ ಅವರು ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಭಾರತ ಮಹತ್ವ ಪಾತ್ರ ವಹಿಸಬೇಕು ಎಂದಿದ್ದಾರೆ.

ADVERTISEMENT

ಆಗಬೇಕು. ಹೆಣ್ಣು­ಮಗುವಿನ ಬದುಕು ಅಮೂಲ್ಯ­ವಾ­ದುದು. ಪತಿ, ಸಹೋದರ ಅಥವಾ ತಂದೆಯೇ ಆಗಿರಲಿ, ಇದನ್ನು ಗಮನ­ದಲ್ಲಿ­ಟ್ಟುಕೊಳ್ಳಬೇಕು’ ಎಂದರು.

‘ಹೆಣ್ಣು ಶಾಲೆಗೆ ಹೋದರೆ ಎಲ್ಲರಿಗೂ ಅನು­ಕೂಲ. ಮಹಿಳೆ­­ಯರು ಹೊರಗೆ ಕೆಲಸ ಮಾಡಲು ಸಾಧ್ಯ­ವಾದಲ್ಲಿ ಕುಟುಂಬ ಸೌಖ್ಯ­­ವಾಗಿ­ರುತ್ತದೆ. ಸಮು­ದಾಯ ಸಂಪದ್ಭರಿತ­ವಾಗಿರುತ್ತದೆ’ ಎಂದು ಮಹಿಳಾ ಶಕ್ತಿಯ ಮಹ­ತ್ವ­ ಮನವರಿಕೆ ಮಾಡಿಕೊಟ್ಟರು.

ಮಿಷೆಲ್‌ ಗಟ್ಟಿಗಿತ್ತಿ
‘ನನ್ನ ಪತ್ನಿ ಮಿಷೆಲ್‌ ಗಟ್ಟಿಗಿತ್ತಿ, ಪ್ರತಿಭಾವಂತೆಯೂ ಹೌದು. ನಾನು ಆಗಾಗ ತಪ್ಪು ಮಾಡಿದಾಗ ಅದನ್ನು ಹೇಳುವುದಕ್ಕೆ ಆಕೆ ಹಿಂಜರಿಯುವುದಿಲ್ಲ’ ಎಂದು ಅಮೆರಿಕದ ಅಧ್ಯಕ್ಷರು ಹಾಸ್ಯ ಚಟಾಕಿ ಹಾರಿಸುತ್ತಲೇ ಪತ್ನಿಯನ್ನು ಕೊಂಡಾಡಿದರು. ‘ನಾನು ಇಬ್ಬರು ಸುಂದರ ಹಾಗೂ  ದಿಟ್ಟ ಹೆಣ್ಣು­ಮಕ್ಕಳ ತಂದೆಯಾಗಿ­ರುವುದಕ್ಕೆ ಹೆಮ್ಮೆ ಪಡುತ್ತೇನೆ’ ಎಂದೂ ಹೇಳಿದರು.

‘ಅಮೆರಿಕದ ಪ್ರಥಮ ಮಹಿಳೆಯಾ­ಗಿರುವ ಮಿಷೆಲ್‌ ಅವರು ಭಾರತ ಸೇರಿದಂತೆ ವಿಶ್ವದ ಎಲ್ಲೆಡೆಯ ಹೆಣ್ಣು­ಮಕ್ಕಳು ಹಾಗೂ ಮಹಿಳೆಯರನ್ನು ಭೇಟಿಯಾಗಿದ್ದಾರೆ. ಮಹಿಳೆಯರಿಗೆ ಎಲ್ಲ ಅವಕಾಶಗಳು ಸಿಗುವಂತೆ ಮಾಡುವ ನಿಟ್ಟಿನಲ್ಲಿ ಅಮೆರಿಕ ಯತ್ನಿಸುತ್ತಿದೆ’ ಎಂದೂ ಒಬಾಮ ನುಡಿದರು.

ನ್ಯಾನ್ಸಿ ಪೆಲೊಸಿ ಅವರು ಅಮೆರಿಕದ ಜನಪ್ರತಿನಿಧಿ ಸಭೆಯಲ್ಲಿ (ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌) ಮೊದಲ ಮಹಿಳಾ ಸ್ಪೀಕರ್‌ ಆಗಿದ್ದರು. ಭಾರತದಲ್ಲಿ ಕೂಡ ಪತ್ನಿಯರು ಹಾಗೂ ತಾಯಂದಿರು ಇಡೀ ಕುಟುಂಬ ಮತ್ತು ಸಮಯದಾಯ­ವನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.