ADVERTISEMENT

ಮಹಿಳೆಯರನ್ನು ಗೌರವಿಸುವ ಕ್ರಮ ಇದಲ್ಲ: ದೀಪಿಕಾ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 10:03 IST
Last Updated 15 ಸೆಪ್ಟೆಂಬರ್ 2014, 10:03 IST

ಬೆಂಗಳೂರು: ಬಾಲಿವುಡ್‌ ನಟಿ ದೀಪಿಕ ಪಡುಕೋಣೆ ತಮ್ಮ ವಿವಾದಿತ ಪೋಟೋ ಪ್ರಕಟಿಸಿದ್ದ ದಿನಪತ್ರಿಕೆ ವಿರುದ್ಧ ಕಿಡಿಕಾರಿದ್ದು ಮಹಿಳೆಯರನ್ನು ತೋರಿಸುವ ಕ್ರಮ ಇದಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.ಹೌದು ನಾನು ಮಹಿಳೆ, ನನಗೆ ಸ್ತನಗಳು ಇವೆ ಹಾಗೇ ಕ್ಲೇವೆಜ್‌ ಇದೆ,ಇದರಿಂದ ನಿಮಗೇನು ತೊಂದರೆ ಎಂದು ಖಾರವಾಗಿ ನುಡಿದಿದ್ದಾರೆ.


ಜನಪ್ರಿಯ ದಿನಪತ್ರಿಕೆ ಎಂದು ಹೇಳಿಕೊಳ್ಳುವ ನಿಮಗೆ ಮಹಿಳೆಯರನ್ನು ಗೌರವಿಸುವುದು ತಿಳಿದಿದೆಯೇ ಎಂದು ಪ್ರಶ್ನಿಸಿದ್ದಾರೆ. ನಿಮಗೆ ಮಹಿಳೆಯರನ್ನು ಗೌರವಿಸುವುದು ಗೊತ್ತಿಲ್ಲದ ಮೇಲೆ ಮಹಿಳಾ ಸಬಲೀಕರಣದ ಬಗ್ಗೆ ಏಕೆ ಮಾತನಾಡುತ್ತೀರಾ ಎಂದು ದೀಪಿಕ ಟ್ವೀಟ್‌ ಮಾಡಿದ್ದಾರೆ.

ಜನಪ್ರಿಯ ಪತ್ರಿಕೆಯೊಂದು ತನ್ನ ವೆಬ್‌ಸೈಟ್‌ನಲ್ಲಿ ’ದೀಪಿಕ ಪಡುಕೋಣೆ ಅವರ ಪೋಟೋ(ವಿಡಿಯೊ) ಹಾಕಿ ’ಓ ಮೈ ಗಾಡ್‌ ದೀಪಿಕ ಪಡುಕೋಣೆ ಅವರ ಕ್ಲೀಮೆಜ್‌ ಶೋ’ ಎಂಬ ಶಿರ್ಷಿಕೆ ಬರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT