ADVERTISEMENT

ಮಾತಿಗಿಂತ ಕೃತಿ ಮುಖ್ಯ ಎಂದ ಸಾಧ್ವಿ

ದಾವೂದ್‌ ಶರಣಾಗತಿ ವಿಚಾರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 11:33 IST
Last Updated 5 ಜುಲೈ 2015, 11:33 IST

ಅಹಮದಾಬಾದ್ (ಪಿಟಿಐ): ಭೂಗತ ಪಾತಕಿ ದಾವೂದ್ ಇಬ್ರಾಹೀಂನನ್ನು ಭಾರತಕ್ಕೆ ವಾಪಸ್‌ ಕರೆ ತರುವ ವಿಚಾರ ‘ಮಾತನಾಡುವುದಲ್ಲ, ಮಾಡುವ ವಿಚಾರ’ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಭಾನುವಾರ ತಿಳಿಸಿದ್ದಾರೆ.

ದಾವೂದ್‌ನನ್ನು ಭಾರತಕ್ಕೆ ತರಲು ಸರ್ಕಾರ ಬಯಸುತ್ತದೆ. ಆದರೆ ಆತನನ್ನು ಹಿಡಿಯಲಾಗದು ಎಂದು ಅವನ ಆಪ್ತ ಚೋಟಾ ಶಕೀಲ್ ಹೇಳಿದ್ದಾನೆ ಎಂಬ ಪ್ರಶ್ನೆಗೆ ಅವರು, ಈ ಬಗ್ಗೆ ಸಾಕಷ್ಟು ಮಾತನಾಡಿಯಾಗಿದೆ ಎಂದು ಪ್ರತಿಕ್ರಿಯಿಸಿದರು. ಅಲ್ಲದೇ, ‘ಇದು ಮಾಡುವ ವಿಚಾರ. ಮಾತನಾಡುವುದಲ್ಲ’ ಎಂದೂ ನುಡಿದಿದ್ದಾರೆ.

ದಾವೂದ್ ಶರಣಾಗಲು ಬಯಸಿದ್ದ ಎಂಬ ವಿಚಾರವನ್ನು ಖ್ಯಾತ ಹಿರಿಯ ವಕೀಲ ರಾಂ ಜೇಠ್ಮಲಾನಿ ಅವರು ಹೇಳಿದ್ದರು. ಆದರೆ ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಶರದ್‌ ಪವಾರ್ ಅವರು ಅದಕ್ಕೆ ಒಪ್ಪಿರಲಿಲ್ಲ ಎಂದೂ ಅವರು ತಿಳಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ್ದ ಪವಾರ್, ‘ಆತನ ಶರಣಾಗತಿ ವಿಚಾರವನ್ನು ಜೇಠ್ಮಲಾನಿ ಅವರು ಹೇಳಿದ್ದರು. ಆದರೆ, ಆತನ ಷರತ್ತುಗಳು ಮನ್ನಿಸಲು ಸಾಧ್ಯವಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.