ADVERTISEMENT

ಮಾರುಕಟ್ಟೆಯಲ್ಲಿ 12 ಲಕ್ಷ ಹೊಸ ನೋಟು: ಅರುಣ್‌ ಜೇಟ್ಲಿ

ಪಿಟಿಐ
Published 10 ಮಾರ್ಚ್ 2017, 11:47 IST
Last Updated 10 ಮಾರ್ಚ್ 2017, 11:47 IST
ಮಾರುಕಟ್ಟೆಯಲ್ಲಿ 12 ಲಕ್ಷ ಹೊಸ ನೋಟು: ಅರುಣ್‌ ಜೇಟ್ಲಿ
ಮಾರುಕಟ್ಟೆಯಲ್ಲಿ 12 ಲಕ್ಷ ಹೊಸ ನೋಟು: ಅರುಣ್‌ ಜೇಟ್ಲಿ   

ನವದೆಹಲಿ: ನೋಟು ಅಮಾನ್ಯೀಕರಣದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್‌(ಆರ್‌ಬಿಐ) 12 ಲಕ್ಷ ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.  

ಈ ಸಂಬಂಧ ಶುಕ್ರವಾರ ಲೋಕಸಭೆಗೆ ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದ ಅರುಣ್‌ ಜೇಟ್ಲಿ ಅವರು, ಆರ್‌ಬಿಐನ ಫೆ.24ರ ವರೆಗಿನ ಮಾಹಿತಿ ಅನ್ವಯ ಒಟ್ಟು 11,64,100 ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ನಂತರದ 15 ದಿನಗಳಲ್ಲಿ ಪ್ರಸ್ತುತ ಇಲ್ಲಿಯ ವರಗೆ ಆರ್‌ಬಿಐ ಬಿಡುಗಡೆ ಮಾಡಿರುವ ಹೊಸ ನೋಟುಗಳ ಸಂಖ್ಯೆ 12 ಲಕ್ಷಕ್ಕೆ ತಲುಪಿರಬಹುದು ಎಂದು ವಿವರಿಸಿದರು.

ADVERTISEMENT

ಚಲಾವಣೆಯಿಂದ ಹಿಂಪಡೆದ ₹500 ಮತ್ತು ₹1,000 ಮುಖಬೆಲೆಯ ನೋಟುಗಳ ನಿಖರ ಸಂಖ್ಯೆಯನ್ನು ತಕ್ಷಣಕ್ಕೆ ನೀಡುವುದು ಕಷ್ಟ. ಹಿಂಪಡೆದ ಪ್ರತಿ ನೋಟನ್ನೂ ಪರಿಶೀಲಿಸಬೇಕು. ಅಸಲಿ ಮತ್ತು ನಕಲಿ ನೋಟುಗಳನ್ನು ಪತ್ತೆ ಮಾಡಬೇಕು. ಇದು ಒಂದು ದೊಡ್ಡ ಸವಾಲಿನ ಕೆಲಸ. ಈ ಎಲ್ಲಾ ಕೆಲಸವನ್ನು ಆರ್‌ಬಿಐ ಪೂರ್ಣಗೊಳಿಸಿದ ಬಳಿಕ ಸದನಕ್ಕೆ ಪೂರ್ಣ ಮಾಹಿತಿಯನ್ನು ನೀಡಲಾಗುವುದು ಎಂದು ಜೇಟ್ಲಿ ಅವರು ಹೇಳಿದರು.

ನೇರ ಮತ್ತು ಪರೋಕ್ಷ ವಸ್ತುಗಳು, ಕಾರ್ಮಿಕರ ವೆಚ್ಚದಿಂದಾಗಿ ನೋಟುಗಳ ವೆಚ್ಚವೂ ಪ್ರತಿ ವರ್ಷ ಬದಲಾಗುತ್ತದೆ. ಹಳೆಯದಾಗುತ್ತಿರುವ ಯಂತ್ರಗಳ ಸಾಮರ್ಥ್ಯ, ನೌಕರರ ಕೌಶಲ ಮಟ್ಟ ವ್ಯತ್ಯಾಸದ ಕಾರಣಗಳನ್ನು ಇದು ಆಧರಿಸಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.