ADVERTISEMENT

ಮುಂದುವರಿದ ಶೋಧಕಾರ್ಯ

ಬಿಯಾಸ್‌ ನದಿಯಲ್ಲಿ ವಿದ್ಯಾರ್ಥಿಗಳು ಕೊಚ್ಚಿ ಹೋದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2014, 20:14 IST
Last Updated 10 ಜೂನ್ 2014, 20:14 IST

ಮಂಡಿ (ಹಿಮಾಚಲಪ್ರದೇಶ), (ಪಿಟಿಐ): ಹಿಮಾಚಲಪ್ರದೇಶದ ಥಾಲೋಟ್‌ ಸಮೀಪ ಬಿಯಾಸ್‌ ನದಿಯಲ್ಲಿ ಕೊಚ್ಚಿ ಹೋದ ಹೈದರಾ­ಬಾದ್‌ನ ವಿಎನ್‌ಆರ್‌ ಕಾಲೇಜಿನ 24 ವಿದ್ಯಾರ್ಥಿಗಳ ಪೈಕಿ ಇನ್ನೂ 19 ಮಂದಿಗಾಗಿ ಶೋಧ ನಡೆಯುತ್ತಿದೆ.

ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಐವರ ಶವ ಸೋಮವಾರ ಪತ್ತೆಯಾಗಿತ್ತು. ಲರ್ಜಿ ಜಲಾಶಯ­ದಿಂದ  ಏಕಾಏಕಿ ನೀರು ಬಿಟ್ಟ ಕಾರಣ ಭಾನುವಾರ ಈ ದುರಂತ ನಡೆದಿತ್ತು. ‘ರಾಷ್ಟ್ರೀಯ ವಿಪತ್ತು ಸ್ಪಂದನ ಪಡೆಯ  (ಎನ್‌ಡಿಆರ್‌ಎಫ್‌) 84 ಸಿಬ್ಬಂದಿ ಹಾಗೂ 10 ಮುಳುಗು ತಜ್ಞರು ನದಿ­ಯಲ್ಲಿ ಶೋಧ ಕಾರ್ಯ ಮುಂದುವ­ರಿಸಿ­ದ್ದಾರೆ’ ಎಂದು ಎನ್‌ಡಿಆರ್‌ಎಫ್‌್ ಅಧಿಕಾರಿ ಜೈದೀಪ್‌್ ಸಿಂಗ್‌್ ತಿಳಿಸಿದ್ದಾರೆ.

ಪರಿಹಾರ: ದುರಂತದಲ್ಲಿ ಮೃತಪಟ್ಟ ಕುಟುಂಬ­ದವರಿಗೆ ಹಿಮಾಚಲ ಪ್ರದೇಶ ಸರ್ಕಾರ ತಲಾ ₨ 1.50 ಲಕ್ಷ ಪರಿಹಾರ ಘೋಷಿಸಿದೆ.
ಹೈದರಾಬಾದ್‌ ವರದಿ: ದುರಂತದಲ್ಲಿ ಮೃತಪಟ್ಟ ಜಿ.ಐಶ್ವರ್ಯ ಅವರ ಅಂತ್ಯಕ್ರಿಯೆ ಸಿಕಂದರಾಬಾದ್‌ನಲ್ಲಿ ನಡೆಯಿತು. ಆಕೆಗೆ ಪರಿಚಯ ಇಲ್ಲದ­ವರು ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕಂಬನಿ ಮಿಡಿದರು.

ADVERTISEMENT

ನವದೆಹಲಿ ವರದಿ: ಬಿಯಾಸ್‌್ ದುರಂತದಲ್ಲಿ ಮೃತಪಟ್ಟವರಿಗೆ ಸಂಸತ್‌ನಲ್ಲಿ ಮಂಗಳವಾರ ಸಂತಾಪ ಸೂಚಿಸಲಾಯಿತು. ‘ಈ ಘಟನೆಯಿಂದ ಇಡೀ ದೇಶಕ್ಕೆ ಆಘಾತವಾಗಿದೆ’ ಎಂದು ಲೋಕಸಭೆ ಸ್ಪೀಕರ್‌್ ಸುಮಿತ್ರಾ ಮಹಾಜನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.