ADVERTISEMENT

ಮುಷ್ಕರದಿಂದ ₹25 ಸಾವಿರ ಕೋಟಿ ನಷ್ಟ: ಅಸೋಚಾಂ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2015, 10:58 IST
Last Updated 2 ಸೆಪ್ಟೆಂಬರ್ 2015, 10:58 IST

ನವದೆಹಲಿ (ಪಿಟಿಐ): ರಸ್ತೆ ಸುರಕ್ಷತಾ ಮಸೂದೆ ವಿರೋಧಿಸಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ರಾಷ್ಟ್ರವ್ಯಾಪಿ ಮುಷ್ಕರದಿಂದ ಅಂದಾಜು ₹25 ಸಾವಿರ  ಕೋಟಿ ನಷ್ಟವಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಂದಾಜು ಮಾಡಿದೆ.

ಕೈಗಾರಿಕೆ, ಬ್ಯಾಂಕ್‌, ರಫ್ತು ವಹಿವಾಟು ಸೇರಿದಂತೆ ಪ್ರಮುಖ ಸೇವೆಗಳು ಸ್ಥಗಿತಗೊಂಡಿರುವುದರಿಂದ ನಷ್ಟ ₹ 25 ಸಾವಿರ ಕೋಟಿಯನ್ನು ದಾಟಬಹುದು. ಬಂದ್‌ನಿಂದ ಆಗುವ ಪರೋಕ್ಷ  ನಷ್ಟವನ್ನೂ ಲೆಕ್ಕ ಹಾಕಿದರೆ ಈ ಮೊತ್ತ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ‘ಅಸೋಚಾಂ’ ಪ್ರಧಾನ ಕಾರ್ಯದರ್ಶಿ ಡಿ.ಎಸ್‌. ರಾವತ್‌ ಹೇಳಿದ್ದಾರೆ.

ಬಂದ್‌ನಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಇಂದು ಕಾರ್ಮಿಕರ ಹಾಜರಾತಿ ಗಣನೀಯವಾಗಿ ತಗ್ಗಿದೆ. ಸಾರ್ವಜನಿಕ ಸಾರಿಗೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.   ಸರಕುಗಳು ವಿಲೇವಾರಿಯಾಗದೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಆದರೆ, ಬಂದ್‌ಗೆ ಕರೆ ನೀಡಿದವರು ಇದನ್ನು ‘ಅಭೂತಪೂರ್ವ ಯಶಸ್ಸು’ ಎಂದು ಹೇಳುತ್ತಿದ್ದಾರೆ. ದಿನಗೂಲಿ ನೌಕರರು ಬಂದ್‌ನಿಂದ ಗರಿಷ್ಠ ಪ್ರಮಾಣದ ನಷ್ಟ ಅನುಭವಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.