ADVERTISEMENT

ಮೂತ್ರ ಸೇವಿಸಿ ಪ್ರತಿಭಟಿಸಿದ ತಮಿಳುನಾಡು ರೈತರು

ಕೃಷಿ ಸಾಲ ಮನ್ನಾ ಮಾಡಲು ಆಗ್ರಹ

ಏಜೆನ್ಸೀಸ್
Published 22 ಏಪ್ರಿಲ್ 2017, 8:31 IST
Last Updated 22 ಏಪ್ರಿಲ್ 2017, 8:31 IST
ಮೂತ್ರ ಸೇವಿಸಿ ಪ್ರತಿಭಟಿಸಿದ ತಮಿಳುನಾಡು ರೈತರು
ಮೂತ್ರ ಸೇವಿಸಿ ಪ್ರತಿಭಟಿಸಿದ ತಮಿಳುನಾಡು ರೈತರು   

ನವದೆಹಲಿ: ಕೃಷಿ ಸಾಲ ಮನ್ನಾ ಮಾಡಲು ಒತ್ತಾಯಿಸಿ ಹಲವು ದಿನಗಳಿಂದ ದೆಹಲಿಯ ಜಂತರ್‌ ಮಂತರ್‌ನಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿರುವ ತಮಿಳುನಾಡು ರೈತರು ಕೇಂದ್ರ ಸರ್ಕಾರದ ಗಮನ ಸೆಳೆಯಲು ಶನಿವಾರ ಮೂತ್ರ ಸೇವಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಈ ರೈತರು ಕೆಲ ದಿನಗಳ ಹಿಂದೆ ತಮ್ಮ ಕೈ ಕೊಯ್ದುಕೊಂಡು ಪ್ರತಿಭಟನೆ ನಡೆಸಿದ್ದರು.

‘ಪ್ರಧಾನಮಂತ್ರಿಯವರಿಗೆ ನಮ್ಮ ದನಿ ಕೇಳುತ್ತಿಲ್ಲ. ನಾವು ಪರಿಪರಿಯಾಗಿ ಬೇಡಿಕೊಂಡರೂ ಸರ್ಕಾರ ನಮ್ಮ ಕಡೆ ನೋಡುತ್ತಿಲ್ಲ. ಹೀಗಾಗಿ ಸರ್ಕಾರವನ್ನು ಮುಜುಗರಕ್ಕೀಡು ಮಾಡಲು ನಾವು ಮೂತ್ರ ಸೇವಿಸುವ ಪ್ರತಿಭಟನೆಗೆ ಮುಂದಾಗಿದ್ದೇವೆ’ ಎಂದು ರೈತರು ಹೇಳಿದ್ದಾರೆ.

ADVERTISEMENT

‘ಸರ್ಕಾರ ಬೇಕಿದ್ದರೆ ನಮ್ಮನ್ನು ಬಂಧಿಸಿ ಜೈಲಿಗೆ ಕಳಿಸಲಿ. ಆದರೆ, ನಾವು ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ’ ರೈತ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.