ADVERTISEMENT

ಮೆಮನ್‌ ಗಲ್ಲು ಶಿಕ್ಷೆಗೆ ಸುಪ್ರೀಂ ತಡೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2015, 9:14 IST
Last Updated 28 ಜುಲೈ 2015, 9:14 IST

ನವದೆಹಲಿ (ಪಿಟಿಐ): 1993ರ ಮುಂಬೈ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ಯಾಕೂಬ್‌ ಮೆಮನ್‌ ಗಲ್ಲು ಶಿಕ್ಷೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ.

ಇದೇ 30 ರಂದು ಯಾಕುಬ್‌ ಮೆಮನ್‌ ಗಲ್ಲು ಶಿಕ್ಷಗೆ ಗುರಿಯಾಗಬೇಕಿತ್ತು. ಗಲ್ಲು ಶಿಕ್ಷೆಗೆ ತಡೆ ಕೋರಿ  ಯಾಕೂಬ್‌ ಮೆಮನ್‌ ಅರ್ಜಿ ಸಲ್ಲಿಸಿದರು. ಇದರ ವಿಚಾರಣೆ  ನಡೆಸಿದ ನ್ಯಾಯಮೂರ್ತಿಗಳಾದ ಎ.ಆರ್.ದವೆ ಮತ್ತು ಕುರಿಯನ್‌ ಜೋಸೆಫ್‌ ಅವರನ್ನು ಒಳಗೊಂಡ ಪೀಠ  ಭಿನ್ನ ನಿಲುವು ತಾಳಿದ್ದರಿಂದ ವಿಚಾರಣೆ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಯಿತು. ವಿಚಾರಣೆ ಪೂರ್ಣಗೊಳ್ಳುವವರೆಗೂ  ಗಲ್ಲು ಶಿಕ್ಷಗೆ ತಡೆ ನೀಡಲಾಗಿದೆ.

ನ್ಯಾ. ಎ. ಆರ್‌ ದವೆ ಅವರು ಗಲ್ಲು ಶಿಕ್ಷೆ ಪರವಾಗಿ ಮತ್ತು ಕುರಿಯನ್‌ ಜೋಸೆಫ್‌ ಅವರು ಗಲ್ಲು ಶಿಕ್ಷೆಯ ವಿರೋಧವಾಗಿ ನಿಲುವು ತಳೆದಿದ್ದರಿಂದ ವಿಚಾರಣೆ ಅರ್ಜಿಯನ್ನು ಪೂರ್ಣ ಪೀಠಕ್ಕೆ ವರ್ಗಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.