ADVERTISEMENT

ಮೊಬೈಲ್‌ ಆಡಳಿತಕ್ಕೆ ಒತ್ತು: ಮೋದಿ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:39 IST
Last Updated 30 ಜನವರಿ 2015, 19:39 IST

ಗಾಂಧಿನಗರ (ಪಿಟಿಐ): ಮೊಬೈಲ್‌ ಮೂಲಕ ಆದಷ್ಟೂ ಹೆಚ್ಚು ಸೇವೆಗಳನ್ನು ಜನರಿಗೆ ಒದಗಿಸಿ ‘ಎಂ– ಆಡಳಿತ’ (ಮೊಬೈಲ್‌ ಆಡಳಿತ) ಉತ್ತೇಜಿಸುವ ಮಾರ್ಗೋಪಾಯಗಳನ್ನು ಹುಡುಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಹಿತಿ ತಂತ್ರಜ್ಞಾನ ಪರಿಣತರಿಗೆ ಸಲಹೆ ನೀಡಿದರು.

ಇ–ಆಡಳಿತದ ೧೮ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ‘ಟ್ವಿಟರ್‌’ ಮೂಲಕ ಮಾತನಾಡಿದ ಅವರು ‘ಇಡೀ ಜಗತ್ತನ್ನು ನಮ್ಮ ಮೊಬೈಲ್‌ಗೆ ತರೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.