ADVERTISEMENT

ಮೋದಿ ಕ್ಷಮೆಗೆ ಕಾಂಗ್ರೆಸ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 9:18 IST
Last Updated 3 ಜುಲೈ 2015, 9:18 IST

ನವದೆಹಲಿ (ಪಿಟಿಐ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌  ಗಲಭೆ ಸಂಬಂಧ ದೇಶದ ಜನರ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಮಾಜಿ ಪ್ರಧಾನಿ ಆಟಲ್‌ ಬಿಹಾರಿ ವಾಜಪೇಯಿ ಅವರು ಗುಜರಾತ್‌ ಗಲಭೆ ಬಗ್ಗೆ ಅಸಮಾಧಾನ ಹೊಂದಿದ್ದರಲ್ಲದೆ ಅದು ನಮ್ಮ ಕಡೆಯಿಂದ ಆಗಿರುವ ತಪ್ಪು’ ಎಂದಿದ್ದರು ಎಂದು ಮಾಜಿ ರಾ ಅಧ್ಯಕ್ಷರಾದ ದುಲತ್‌ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ವಿಷಯವನ್ನೇ  ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್‌ ನರೇಂದ್ರ ಮೋದಿ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದಿದೆ.

ಕಾಂಗ್ರೆಸ್‌ ವಕ್ತಾರ ಅಜಯ್‌ಕುಮಾರ್‌ ಮಾತನಾಡಿ ಬಿಜೆಪಿಯದು ‘ಹುಸಿ ರಾಷ್ಟ್ರೀಯವಾದ’ ಎಂದು ಟೀಕಿಸಿದ್ದಾರೆ. ದುಲತ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಗುಜರಾತ್‌ ಗಲಭೆಗೆ ನರೇಂದ್ರ ಮೋದಿ ಅವರೇ ನೇರ  ಹೊಣೆ ಅವರು ಈ ಕೂಡಲೇ ದೇಶದ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

ಮೋದಿ ಅವರ ತಪ್ಪನ್ನು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ  ಎತ್ತಿ ತೋರಿಸಿದ್ದಾರೆ. ಮೋದಿ  ಅವರಿಗೆ ರಾಜಧರ್ಮ ಪಾಲಿಸಲು ಬರುತ್ತಿಲ್ಲ  ಅವರಿಗೆ ನೈತಿಕತೆ ಇದ್ದರೆ ಪದತ್ಯಾಗ ಮಾಡಲಿ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT