ADVERTISEMENT

ಯಾವ ಪಕ್ಷಕ್ಕೂ ಬೇಡ ಹೊಂದಾಣಿಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 19:30 IST
Last Updated 28 ಅಕ್ಟೋಬರ್ 2014, 19:30 IST

ಜಮ್ಮು (ಪಿಟಿಐ): ಬಿಜೆಪಿ ಸೇರಿದಂತೆ ಜಮ್ಮು ಕಾಶ್ಮೀರದ ಎಲ್ಲ ಪಕ್ಷಗಳೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಮುಂದಾಗಿವೆ. ಆಡಳಿತಾರೂಢ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ), ಪಿಡಿಸಿ, ಜೆಕೆಎನ್‌ಪಿಪಿಗಳು ಯಾವುದೇ ಪಕ್ಷಗಳ ಜೊತೆ ಹೊಂದಾಣಿಕ ಇಲ್ಲದೆ ಚುನಾವಣೆ ಎದುರಿಸಲು ನಿರ್ಧರಿಸಿವೆ. ಇಲ್ಲಿನ 87 ಕ್ಷೇತ್ರಗಳಿಗೆ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ನವೆಂಬರ್‌ 25ರಂದು ಮೊದಲ ಹಂತದ ಮತದಾನ ನಡೆಯಲಿದೆ.

ಚುನಾವಣಾ ಆಯೋಗವು ಮೊದಲ ಹಂತದ ಮತದಾನಕ್ಕೆ ಮಂಗಳವಾರ ಅಧಿ­ಸೂಚನೆ ಹೊರಡಿಸಿದೆ. ಆದರೆ ಯಾವುದೇ ಪಕ್ಷಗಳು ಪ್ರಣಾಳಿಕೆಯನ್ನಾಗಲಿ, ಅಭ್ಯರ್ಥಿ­ಗಳ ಪಟ್ಟಿಯನ್ನಾಗಲಿ ಇನ್ನೂ ಬಿಡುಗಡೆ ಮಾಡಿಲ್ಲ.  ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಬಿಎಸ್‌ಪಿ ಮತ್ತು ಎನ್‌ಸಿಪಿಗಳು ಏಕಾಂಗಿ­ಯಾಗಿಯೇ ಸ್ಪರ್ಧಿಸುವುದಾಗಿ ಪ್ರಕಟಿ­ಸಿವೆ.

ಆದರೆ ಎನ್‌ಸಿ ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್‌ ಮೈತ್ರಿ ಮುಂದು­ವರಿಸುವ ಬಗ್ಗೆ ಯಾವುದೇ ಮಾತು ಆಡಿಲ್ಲ. ಪ್ರಾದೇಶಿಕ ಪಕ್ಷಗಳಾದ ಎನ್‌ಸಿ, ಪಿಡಿಸಿ ಮತ್ತು ಜೆಕೆಎನ್‌ಪಿಪಿಗಳು ಏಕಾಂಗಿ­ಯಾ­ಗಿಯೇ ಸ್ಪರ್ಧಿಸಲು ಒಲವು ಹೊಂದಿವೆ. ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ ಎಂದು ಬಿಜೆಪಿ ಈಗಾಗಲೇ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.