ADVERTISEMENT

ಯುಪಿಎಸ್‌ಸಿ ಫಲಿತಾಂಶ ಪ್ರಕಟ

ಪಿಟಿಐ
Published 27 ಜುಲೈ 2017, 20:10 IST
Last Updated 27 ಜುಲೈ 2017, 20:10 IST
ಯುಪಿಎಸ್‌ಸಿ ಫಲಿತಾಂಶ ಪ್ರಕಟ
ಯುಪಿಎಸ್‌ಸಿ ಫಲಿತಾಂಶ ಪ್ರಕಟ   

ನವದೆಹಲಿ: ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ  ಗುರುವಾರ ಪ್ರಕಟಿಸಿದೆ.
ಜೂನ್‌ 18ರಂದು ಆಯೋಗ ಪರೀಕ್ಷೆ ನಡೆಸಿತ್ತು. ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ವಿವರವಾದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

www.upsc.gov.in ವೆಬ್‌ಸೈಟ್‌ನಲ್ಲಿ ಆಗಸ್ಟ್‌ 17ರಿಂದ 31ರವರೆಗೆ ಅರ್ಜಿಗಳು ಲಭ್ಯವಾಗಲಿದೆ. ಅಭ್ಯರ್ಥಿಗಳು ಮೊದಲು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡ ಬಳಿಕ ಅರ್ಜಿ ಭರ್ತಿ ಮಾಡಬೇಕು.

‘ಇ–ಪ್ರವೇಶ ಪತ್ರ’ ಮತ್ತು ಪರೀಕ್ಷಾ ವೇಳಾಪಟ್ಟಿ ಆಯೋಗದ ವೆಬ್‌ಸೈಟ್‌ನಲ್ಲಿ  ಮುಖ್ಯ ಪರೀಕ್ಷೆ ನಡೆಯುವ ಎರಡು ವಾರಗಳ ಮುನ್ನ ಲಭ್ಯವಾಗಲಿದೆ.ಮುಖ್ಯ ಪರೀಕ್ಷೆ ಅಕ್ಟೋಬರ್‌ 28ರಿಂದ ಆರಂಭವಾಗಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.