ADVERTISEMENT

ಯುವ ತೆಲುಗು ನಟ ನೇಪಾಳದಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 12:19 IST
Last Updated 27 ಏಪ್ರಿಲ್ 2015, 12:19 IST
ಯುವ ತೆಲುಗು ನಟ ನೇಪಾಳದಲ್ಲಿ ಸಾವು
ಯುವ ತೆಲುಗು ನಟ ನೇಪಾಳದಲ್ಲಿ ಸಾವು   

ಹೈದರಾಬಾದ್‌ (ಪಿಟಿಐ): ಯುವ ತೆಲುಗು ಚಿತ್ರನಟ, ನೃತ್ಯ ನಿರ್ದೇಶಕ ಕೆ. ವಿಜಯ್‌ ಅವರು ನೇಪಾಳದಲ್ಲಿ ಸಂಭವಿಸಿದ ಭೂಕಂಪನದಲ್ಲಿ  ಮೃತಪಟ್ಟಿದ್ದಾರೆ.

‘ಏಟಕ್ಕಾರಂ ಡಾಟ್‌ ಕಾಮ್‌’  ಚಿತ್ರೀಕರಣಕ್ಕಾಗಿ ನೇಪಾಳಕ್ಕೆ ಹೋಗಿದ್ದ ಅವರು ಕೋಕ್ರದಿಂದ ಕಠ್ಮಂಡುವಿಗೆ  ತಡರಾತ್ರಿ ವಾಹನದಲ್ಲಿ ವಾಪಾಸು ಬರುವಾಗ ಸಂಭವಿಸಿದ ಅಪಘಾತದಲ್ಲಿ  ಮೃತಪಟ್ಟರು ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ.

ಭಾರಿ ಮಳೆ ಸುರಿಯುತ್ತಿದ್ದರಿಂದ ರಸ್ತೆ ಸರಿಯಾಗಿ ಕಾಣದೇ  ವಾಹನವು ಅಪಘಾತಗೊಂಡು ವಿಜಯ್‌ ಅವರು ಸಾವನ್ನಪ್ಪಿದ್ದಾರೆ. ವಿಜಯ್‌ ಜೊತೆಯಲ್ಲಿ ಇದ್ದ ಮೂವರು ಗಾಯಗೊಂಡಿದ್ದಾರೆ. ವಿಜಯ್ ಅವರು ಈ ಚಿತ್ರದ ನಿರ್ಮಾಪಕರ ಸಂಬಂಧಿಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.