ADVERTISEMENT

ರಂಜಿತ್ ಸಿನ್ಹಾ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್‌ ಆದೇಶ

ಏಜೆನ್ಸೀಸ್
Published 23 ಜನವರಿ 2017, 9:45 IST
Last Updated 23 ಜನವರಿ 2017, 9:45 IST
ರಂಜಿತ್‌ ಸಿನ್ಹಾ
ರಂಜಿತ್‌ ಸಿನ್ಹಾ   

ನವದೆಹಲಿ: ಸಿಬಿಐನ ಮಾಜಿ ನಿರ್ದೇಶಕ ರಂಜಿತ್‌ ಸಿನ್ಹಾ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ ಸಿಬಿಐಗೆ ನಿರ್ದೇಶನ ನೀಡಿದೆ.

ಕಲ್ಲಿದ್ದಲು ಹಗರಣದಲ್ಲಿ ಸಿನ್ಹಾ ಪಾತ್ರ ಕುರಿತ ತನಿಖೆಗಾಗಿ ಇಬ್ಬರು ಅಧಿಕಾರಿಗಳ ತನಿಖಾ ತಂಡ ರಚಿಸುವಂತೆ ಸುಪ್ರೀಂಕೋರ್ಟ್‌ ಸಿಬಿಐ ನಿರ್ದೇಶಕರಿಗೆ ಸೂಚನೆ ನೀಡಿದೆ.

ಸಿಬಿಐ ನಿರ್ದೇಶಕರಾಗಿದ್ದ ವೇಳೆ ರಂಜಿತ್ ಸಿನ್ಹಾ ಅವರು ಕಲ್ಲಿದ್ದಲು ಮತ್ತು ತರಂಗಾಂತರ ಹಗರಣಗಳ ಆರೋಪಿಗಳನ್ನು ಭೇಟಿ ಮಾಡಿದ್ದರು ಎಂಬ ಆರೋಪವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.