ADVERTISEMENT

ರಜನಿಕಾಂತ್‌ ಮುಂದಿನ ಸಿನಿಮಾ ‘ಕಾಳ ಕರಿಕಾಳನ್‌’

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ರಜನಿಕಾಂತ್‌ ಮುಂದಿನ ಸಿನಿಮಾ ‘ಕಾಳ ಕರಿಕಾಳನ್‌’
ರಜನಿಕಾಂತ್‌ ಮುಂದಿನ ಸಿನಿಮಾ ‘ಕಾಳ ಕರಿಕಾಳನ್‌’   

ಚೆನ್ನೈ: ಕಬಾಲಿ ಸಿನಿಮಾದ ಯಶಸ್ಸಿನ ನಂತರ ಸೂಪರ್‌ಸ್ಟಾರ್‌ ರಜನಿಕಾಂತ್‌ ‘ಕಾಳ ಕರಿಕಾಳನ್‌’  ಹೆಸರಿನ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.

ಪಾ ರಂಜಿತ್‌ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಅಳಿಯ ಧನುಷ್‌ ಅವರ ‘ವಂಡರ್ಬಾರ್‌ ಫಿಲ್ಮ್ಸ್‌’ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕಬಾಲಿ ಸಿನಿಮಾವನ್ನು ರಂಜಿತ್‌ ಅವರೇ ನಿರ್ದೇಶನ ಮಾಡಿದ್ದರು.

ಧನುಷ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬಿಡುಗಡೆಗೊಳಿಸಿರುವ ‘ಫಸ್ಟ್‌ಲುಕ್‌’ನ ದೃಶ್ಯಗಳಲ್ಲಿ ರಜನಿ ಧೋತಿ, ಅಂಗಿ ಹಾಗೂ ಸನ್‌ಗ್ಲಾಸ್‌ ಧರಿಸಿದ್ದಾರೆ. 
ಮತ್ತೊಂದು ಚಿತ್ರದಲ್ಲಿ ರಜನಿಕಾಂತ್‌   ಆಕ್ರೋಶದ ಮುಖ ಹೊಂದಿದ್ದು, ಹಣೆಯಲ್ಲಿ ರಕ್ತದ ಕಲೆಯಿದೆ.

ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಮುಂಬೈನ ಮಾಜಿ ಭೂಗತ ದೊರೆ ಹಾಲಿ ಅಲಿ ಮಸ್ತಾನ್‌ ಕುರಿತಾಗಿ ಈ ಸಿನಿಮಾ ತಯಾರಾಗುತ್ತಿದೆ ಎಂದು ಆತನ ಪುತ್ರ ಆರೋಪಿಸಿದ್ದರು. ಆದರೆ ಚಿತ್ರ ತಂಡವು ಈ ಆರೋಪವನ್ನು ತಳ್ಳಿಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.