ADVERTISEMENT

ರಸ್ತೆ ನಿಯಮ ಉಲ್ಲಂಘಿಸಿದರೆ ಫಜೀತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2014, 19:30 IST
Last Updated 5 ಜೂನ್ 2014, 19:30 IST

ನವದೆಹಲಿ: ಪದೇ ಪದೇ ರಸ್ತೆ ಸಂಚಾರ ನಿಯಮ ಉಲ್ಲಂಘಿಸು­ವವರ ಪರವಾನಗಿಯನ್ನು ರದ್ದುಪಡಿ­ಸಲು ಅಧಿಕಾರಿಗಳಿಗೆ ಅಧಿಕಾರ ನೀಡಲು ಮೋಟಾರ್‌ ವಾಹನ (ತಿದ್ದುಪಡಿ) ಮಸೂದೆಯನ್ನು ಪುನರ್‌­ರೂಪಿಸ­ಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದರು.

‘ಮೂರಕ್ಕಿಂತ ಹೆಚ್ಚು ಬಾರಿ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ­ದರೆ ಅಂತಹವರ ಪರ­ವಾ­­ನಗಿ­ಯನ್ನು 6 ತಿಂಗಳವರೆಗೆ ಅಮಾನತಿ­ನಲ್ಲಿ ಇಡ­­ಲಾ­ಗು­­ವುದು. ನಂತರವೂ ನಿಯಮ ಉಲ್ಲಂಘಿಸಿ­ದರೆ ಅವರ ಪರವಾನ­ಗಿ­ಯನ್ನು ರದ್ದುಪಡಿಸ­ಲಾ­ಗು­ವುದು’ ಎಂದು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.