ADVERTISEMENT

ರಾಜ್ಯದವರಿಗೆ ಆದ್ಯತೆ ಸಲ್ಲದು: ಸುಪ್ರೀಂ

ವೈದ್ಯಕೀಯ ಪಿಜಿ ಪ್ರವೇಶ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2014, 19:30 IST
Last Updated 25 ಏಪ್ರಿಲ್ 2014, 19:30 IST

ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ಸಂಬಂಧ ಕರ್ನಾಟಕ ಸರ್ಕಾರ ಹೊರತಂದಿರುವ ಕಿರುಹೊತ್ತಿಗೆಯಲ್ಲಿ ತನ್ನ ರಾಜ್ಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ, ಅನ್ಯ ರಾಜ್ಯ­ಗಳ ಅಭ್ಯರ್ಥಿಗಳಿಗೆ ಅವಕಾಶ ನಿರಾಕರಿಸಿ­ರುವಂತಹ ನಿಯಮ ಅಸಾಂವಿ­ಧಾನಿಕ ಎಂದು ಸುಪ್ರೀಂ ಕೋರ್ಟ್‌್ ಹೇಳಿದೆ.

‘ಕರ್ನಾಟಕ ಮೂಲ’ದ ಎಂಬ  ಕಡ್ಡಾಯ ನಿಯಮವು ಕರ್ನಾಟಕದ ಎಂಬಿಬಿಎಸ್‌ ಮತ್ತು ಬಿಡಿಎಸ್‌ ಕಾಲೇಜುಗಳಲ್ಲೇ ವ್ಯಾಸಂಗ ಮಾಡಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಸ್ನಾತಕೋತರ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಅವ­ಕಾಶ ನೀಡುವುದಿಲ್ಲ. ಆದ್ದರಿಂದ ಇದು ಸಂವಿಧಾನಬಾಹಿರ ಎಂದು ನ್ಯಾಯ­ಮೂರ್ತಿಗಳಾದ ಎ.ಕೆ. ಪಟ್ನಾ­ಯಕ್‌ ಮತ್ತು ಎಫ್‌.ಎಂ.ಐ. ಕಲೀಫುಲ್ಲಾ ಅವರ ಪೀಠ ಹೇಳಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ವಿಶಾಲ್‌ ಗೋಯಲ್‌ ಮತ್ತು ಇತರರು ಕರ್ನಾಟಕ ಸರ್ಕಾರ ಹೊರತಂದಿರುವ ಕಿರುಹೊತ್ತಿಗೆಯ ನಿಯಮಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.