ADVERTISEMENT

ರಾಜ್ಯಪಾಲರಿಂದ ಬೆದರಿಕೆ: ಮಮತಾ

​ಪ್ರಜಾವಾಣಿ ವಾರ್ತೆ
Published 4 ಜುಲೈ 2017, 19:30 IST
Last Updated 4 ಜುಲೈ 2017, 19:30 IST
ರಾಜ್ಯಪಾಲರಿಂದ ಬೆದರಿಕೆ: ಮಮತಾ
ರಾಜ್ಯಪಾಲರಿಂದ ಬೆದರಿಕೆ: ಮಮತಾ   

ಕೋಲ್ಕತ್ತ: ‘ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ಬೆದರಿಕೆಯೊಡ್ಡಿದ್ದು, ಬಿಜೆಪಿ ಬ್ಲಾಕ್‌ ಅಧ್ಯಕ್ಷರಂತೆ ವರ್ತಿಸುತ್ತಿದ್ದಾರೆ ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

‘ದೂರವಾಣಿ ಕರೆ ಮಾಡಿ ಬೆದರಿಕೆ ಒಡ್ಡಿದರು. ಅವರು ಬಿಜೆಪಿ ಪಕ್ಷಪಾತಿಯಂತೆ ಮಾತನಾಡಿದರು. ಇದರಿಂದ ನನಗೆ ಅವಮಾನವಾಗಿದೆ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದೂ ಹೇಳಿದೆ’ ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಅವರು ದೂರಿದರು. ‘ಅವರು ಬಿಜೆಪಿಯ ಬ್ಲಾಕ್‌ ಅಧ್ಯಕ್ಷರಂತೆ ವರ್ತಿಸಿದರು’ ಎಂದು ತಿಳಿಸಿದರು.

‘ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತಂತೆ ದೊಡ್ಡದಾಗಿ ಮಾತನಾಡಿದರು. ನಾನು ಯಾರ ಮರ್ಜಿಯಲ್ಲೂ ಇಲ್ಲ.  ಅವರು ಮಾತನಾಡಿದ್ದು, ನೋಡಿ ನಾನೇ ಹುದ್ದೆ ಬಿಟ್ಟು (ಕುರ್ಚಿ)ತೆರಳಬೇಕು ಎಂದು ಎನ್ನಿಸಿತ್ತು’ ಎಂದರು.

ADVERTISEMENT

ತ್ರಿಪಾಠಿ ಸಮರ್ಥನೆ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾಡಿರುವ ಆರೋಪದ ಕುರಿತು ತ್ರಿಪಾಠಿ ಅವರು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ರಾಜಭವನದಿಂದ ಪತ್ರಿಕಾ ಹೇಳಿಕೆ ನೀಡಲಾಗಿದೆ.

‘ಸಾರ್ವಜನಿಕರು ಯಾವುದೇ ರೀತಿಯ ಆರೋಪ ಮಾಡಿದರೆ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದು ರಾಜ್ಯಪಾಲರ ಕರ್ತವ್ಯ. ಯಾವುದೇ ಕಾರಣಕ್ಕೂ ರಾಜ್ಯಪಾಲರು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಆಗುವುದಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಹೇಳಲಾಗಿದೆ ಅಷ್ಟೇ’ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.