ADVERTISEMENT

ರಾಜ್ಯಸಭೆಯಲ್ಲಿ ಮುಂದಿನ ವಾರ ಜಿಎಸ್‌ಟಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2016, 0:00 IST
Last Updated 30 ಜುಲೈ 2016, 0:00 IST
ರಾಜ್ಯಸಭೆಯಲ್ಲಿ ಮುಂದಿನ ವಾರ ಜಿಎಸ್‌ಟಿ ಚರ್ಚೆ
ರಾಜ್ಯಸಭೆಯಲ್ಲಿ ಮುಂದಿನ ವಾರ ಜಿಎಸ್‌ಟಿ ಚರ್ಚೆ   

ನವದೆಹಲಿ (ಪಿಟಿಐ): ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಸೂದೆ ರಾಜ್ಯಸಭೆಯ ಮುಂದಿನ ವಾರದ ಕಲಾಪಗಳ ಪಟ್ಟಿಯಲ್ಲಿ ಸೇರಿಸಿದೆ. 

ಮೇಲ್ಮನೆ ಕಲಾಪಗಳ ಬಗ್ಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಸಂವಿಧಾನ (122ನೇ ತಿದ್ದುಪಡಿ) ಮಸೂದೆ – 2014ನ್ನು ಮುಂದಿನ ವಾರ ಮಂಡಿಸಲಾಗುವುದು ಎಂದರು.

ಶೇಕಡ 1ರಷ್ಟು ತಯಾರಿಕಾ ತೆರಿಗೆ ವಿಧಿಸುವ ಅಂಶವನ್ನು ಕೇಂದ್ರ ಸಚಿವ ಸಂಪುಟವು 27ರಂದು ಮಸೂದೆಯಿಂದ ಕೈಬಿಟ್ಟಿದೆ. ಅಲ್ಲದೆ, ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಮೊದಲ ಐದು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರಗಳು ಆದಾಯದಲ್ಲಿ ನಷ್ಟ ಅನುಭವಿಸಿದರೆ ಅದಕ್ಕೆ ಪರಿಹಾರ ನೀಡುವ ಭರವಸೆಯನ್ನೂ ಕೇಂದ್ರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.