ADVERTISEMENT

ರಾಣಿ ಮುಖರ್ಜಿ ಆದಿತ್ಯ ಚೋಪ್ರಾ ಮದುವೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 9:51 IST
Last Updated 22 ಏಪ್ರಿಲ್ 2014, 9:51 IST

ಮುಂಬೈ (ಪಿಟಿಐ); ಬಾಲಿವುಡ್‌ ನಟಿ ರಾಣಿ ಮುಖರ್ಜಿ ಮತ್ತು ಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾ ಇಟಲಿಯಲ್ಲಿ ರಹಸ್ಯವಾಗಿ ಮದುವೆಯಾಗಿದ್ದಾರೆ.

ಕಳೆದ ರಾತ್ರಿ ನಡೆದ ಸರಳ ವಿವಾಹ ಸಂಭ್ರಮದಲ್ಲಿ ರಾಣಿ ಮುಖರ್ಜಿ ಚೋಪ್ರಾ ಅವರನ್ನು ವರಿಸಿದರು. ರಹಸ್ಯವಾಗಿ ನಡೆದ ಈ ವಿವಾಹಕ್ಕೆ ಉಭಯ ಕುಟುಂಬಗಳ ಸದಸ್ಯರು ಮತ್ತು ಆಪ್ತರು ಆಗಮಿಸಿದ್ದರು.

36ರ ಹರೆಯದ ರಾಣಿ ಮುಖರ್ಜಿ ಹಾಗೂ 42ರ ಹರೆಯದ ಚೋಪ್ರಾ ಅವರು ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 
’ಈ ದಿನ ನನಗೆ ಅತೀವ ಸಂತಸದ ದಿನ’ ಎಂದು ರಾಣಿ ಟ್ವಿಟ್‌ ಮಾಡಿದ್ದಾರೆ. ಅಲ್ಲದೆ ಅಭಿಮಾನಿಗಳಿಂದ ಆಶೀರ್ವಾದ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT