ADVERTISEMENT

ರಾಷ್ಟ್ರಪತಿ ಹುದ್ದೆಗೆ ಅಡ್ವಾಣಿ ಸೂಕ್ತ ವ್ಯಕ್ತಿ: ನಿತಿನ್ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2014, 19:30 IST
Last Updated 21 ಜೂನ್ 2014, 19:30 IST

ನವದೆಹಲಿ (ಪಿಟಿಐ): ರಾಷ್ಟ್ರಪತಿ ಹುದ್ದೆಗೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ಸೂಕ್ತ­ವಾದ ವ್ಯಕ್ತಿ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

‘ಇಂಡಿಯಾ ಟಿವಿ’ ಖಾಸಗಿ ವಾಹಿನಿ­ಯಲ್ಲಿ ಪ್ರಸಾರವಾಗುವ ರಜತ್ ಶರ್ಮ ಅವರ ‘ಆಪ್‌ ಕಿ ಅದಾಲತ್’ ಕಾರ್ಯ­ಕ್ರಮದಲ್ಲಿ ಗಡ್ಕರಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಅಡ್ವಾಣಿ ಅವರು ಈ ಹಿಂದೆ ಉಪ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿ­ದ್ದರು. ಹಾಗಾಗಿ, ರಾಷ್ಟ್ರಪತಿ ಸ್ಥಾನಕ್ಕೆ ಅಡ್ವಾಣಿ ಸೂಕ್ತ ವ್ಯಕ್ತಿ ಎಂದು ಅವರು ತಿಳಿಸಿದ್ದಾರೆ. 

‘75 ವರ್ಷಕ್ಕಿಂತ ಹಿರಿಯ ಬಿಜೆಪಿ ನಾಯ­ಕ­ರಿಗೆ ಕೇಂದ್ರ ಸಚಿವ ಸಂಪುಟ­ದಲ್ಲಿ ಸ್ಥಾನ ನೀಡಬಾರದು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಜ್ಞಾಪೂ­ರ್ವಕ ನಿರ್ಧಾರ­ವಾಗಿತ್ತು. ಉದಾಹ­ರಣೆಗೆ ಬಾಲಿವುಡ್‌ನ ಖ್ಯಾತ­ನಟ ಅಮಿತಾಭ್ ಬಚ್ಚನ್ ಅವರು ಈಗ ಹೀರೋ ಆಗಿ ಅಭಿನಯಿಸಲು ಸಾಧ್ಯವಿಲ್ಲ. ಏಕೆಂದರೆ ಈಗಾಗಲೇ ಹೊಸ ತಲೆಮಾರು ಬಂದಿದೆ. ಅಂತೆಯೇ ಇನ್ನೂ ಹತ್ತು ವರ್ಷ ಕಾಲ ಕಳೆದಲ್ಲಿ ನಾನೂ ಕೂಡಾ ನನ್ನ ಈಗಿನ ಸ್ಥಾನಕ್ಕೆ ಹೊಂದಲಾರೆನು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.