ADVERTISEMENT

ರಾಹುಲ್ ಹೊಗಳಿದ ಅಖಿಲೇಶ್ ಚುನಾವಣಾ ಮೈತ್ರಿಗೆ ಮುನ್ನುಡಿ?

ಪಿಟಿಐ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಲಖನೌ : ರಾಹುಲ್ ಗಾಂಧಿ ಮಾನವೀಯ ಗುಣವುಳ್ಳ ವ್ಯಕ್ತಿ, ನಾವು ಏಕೆ ಅವರ ಸ್ನೇಹಿತರಾಗಬಾರದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿರುವುದು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಸಾಧಿಸುವ ಲಕ್ಷಣಗಳು ಎಂದು ವಿಶ್ಲೇಷಿಸಲಾಗುತ್ತಿದೆ.

ರಾಹುಲ್ ಅವರು ಉತ್ತರ ಪ್ರದೇಶದಲ್ಲಿ 2500 ಕಿ. ಮೀ. ಕಿಸಾನ್ ಮಹಾಯಾತ್ರಾ ಆರಂಭಿಸಿದ ಸಂದರ್ಭದಲ್ಲಿ ಅಖಿಲೇಶ್ ಸ್ನೇಹದ ಹಸ್ತ ಚಾಚಲು ಮುಂದಾಗಿರುವುದು ರಾಜ್ಯದಲ್ಲಿ ಹೊಸ ರಾಜಕೀಯ ಮೈತ್ರಿಯ ಚರ್ಚೆ ಹುಟ್ಟು ಹಾಕಿದೆ. ಆದರೆ ಅಖಿಲೇಶ್ ಅವರು ರಾಜಕೀಯ ಮೈತ್ರಿ ಸಾಧ್ಯತೆಯ ಬಗ್ಗೆ ಹಾರಿಕೆಯ ಉತ್ತರ ನೀಡಿದ್ದಾರೆ. 

‘ರಾಹುಲ್ ಅವರು ಒಳ್ಳೆಯ ಮನುಷ್ಯ, ಬಹಳ ಒಳ್ಳೆಯ ಹುಡುಗ, ಅವರು ಉತ್ತರಪ್ರದೇಶದಲ್ಲಿ ಹೆಚ್ಚು ದಿನ ಇದ್ದರೆ ನಮ್ಮ ಜತೆ ದೋಸ್ತಿ ಆಗಬಹುದು, ಒಳ್ಳೆಯ ಜನ ಒಂದಾದರೆ ತಪ್ಪೇನು?’ ಎಂದು ಅಖಿಲೇಶ್ ಹೇಳಿದ್ದಾರೆ.

ಕಿಸಾನ್ ಮಹಾಯಾತ್ರಾದಲ್ಲಿ ರಾಹುಲ್ ಅವರು ಮೋದಿ ಮತ್ತು ಕೇಂದ್ರ ಸರ್ಕರದ ವಿರುದ್ಧ ಕಟು ಮಾತುಗಳಿಂದ ಟೀಕಿಸುತ್ತಿದ್ದರೂ ಸಮಾಜವಾದಿ ಪಕ್ಷದ ಸರ್ಕಾರದ ವಿರುದ್ಧ ಅಂತಹ ಕಠೋರ ಟೀಕೆ ಮಾಡುತ್ತಿಲ್ಲ.

ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಮಧ್ಯೆ ಚುನಾವಣಾ ಮೈತ್ರಿ ಏರ್ಪಡುವ ಸಾಧ್ಯತೆಗಳು ಇವೆಯೇ ಎಂದು ಕೇಳಿದಾಗ, ‘ನೀವು (ಪತ್ರಕರ್ತರು) ಇದನ್ನು ರಾಜಕೀಯವಾಗಿ ಏಕೆ ನೋಡುತ್ತೀರಿ’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT