ADVERTISEMENT

ಲಡಾಖ್: ಚೀನಾ ಸೇನೆ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST

ನವದೆಹಲಿ: ಕಾಶ್ಮೀರ ಕಣಿವೆಯ ಲಡಾಖ್‌ ಪ್ರದೇಶದಲ್ಲಿ ಕೆಲವಾರು ದಿನಗಳಿಂದ ಬೀಡುಬಿಟ್ಟಿದ್ದ ಚೀನಾ ಸೈನಿಕರು ಮಂಗಳವಾರ ಅಲ್ಲಿಂದ ಹೊರನಡೆದಿದ್ದಾರೆ.

ಭಾರತ ಮತ್ತು ಚೀನಾ ಸೇನಾ ಪಡೆಗಳ ಗಡಿ ಕಮಾಂಡರ್‌ಗಳ ನಡುವೆ ಮಂಗಳವಾರ ಮಧ್ಯಾಹ್ನ ಸಭೆ ನಡೆದ ನಂತರ ಸೇನಾ ಪಡೆಗಳು ಅಲ್ಲಿಂದ ಹೊರನಡೆದವು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ವಿವಾದಿತ ಪ್ರದೇಶದಿಂದ ನಿಯೋ­ಜಿತ ಸೈನಿಕರನ್ನು ವಾಪಸ್‌ ಕರೆಸಿಕೊಂಡು ಸೆ.1ರಿಂದ ಯಥಾಸ್ಥಿತಿ ಕಾಯ್ದು­ಕೊ­ಳ್ಳಲು ಸೆ.26ರಂದು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.