ADVERTISEMENT

‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಭಾರತದಲ್ಲಿ ಬಿಡುಗಡೆಗೆ ಸೆನ್ಸಾರ್‌ ಮಂಡಳಿ ಅಡ್ಡಗಾಲು

ಮಹಿಳಾ ಪರ ಕತೆ

ಏಜೆನ್ಸೀಸ್
Published 22 ಏಪ್ರಿಲ್ 2017, 11:05 IST
Last Updated 22 ಏಪ್ರಿಲ್ 2017, 11:05 IST
‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಭಾರತದಲ್ಲಿ ಬಿಡುಗಡೆಗೆ ಸೆನ್ಸಾರ್‌ ಮಂಡಳಿ ಅಡ್ಡಗಾಲು
‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಭಾರತದಲ್ಲಿ ಬಿಡುಗಡೆಗೆ ಸೆನ್ಸಾರ್‌ ಮಂಡಳಿ ಅಡ್ಡಗಾಲು   

ಮುಂಬೈ: ಮಹಿಳಾ ಪ್ರಧಾನವಾದ ‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ’ ಚಿತ್ರವು ಭಾರತದಲ್ಲಿ ಪ್ರದರ್ಶನ ಕಾಣಲು ಸೆನ್ಸಾರ್ ಮಂಡಳಿ ಅಡ್ಡಗಾಲು ಹಾಕಿದೆ.

‘ಚಿತ್ರದ ಕತೆಯು ಮಹಿಳಾ ಪ್ರಧಾನವಾಗಿದೆ. ಮಹಿಳೆಯರ ಬದುಕಿನ ಅತಿರೇಕದ ಕಲ್ಪನೆಗಳು ಚಿತ್ರದಲ್ಲಿವೆ. ಅಶ್ಲೀಲ ಸಂಭಾಷಣೆ, ಅಶ್ಲೀಲ ಧ್ವನಿಯನ್ನು (Audio Pornography) ಚಿತ್ರದಲ್ಲಿ ಬಳಸಲಾಗಿದೆ. ಸಮಾಜದ ಒಂದು ನಿರ್ದಿಷ್ಟ ವರ್ಗವನ್ನು ಚಿತ್ರ ಸೂಕ್ಷ್ಮವಾಗಿ ಸ್ಪರ್ಶಿಸುತ್ತದೆ’ ಎಂಬ ಕಾರಣ ನೀಡಿ ಪ್ರಮಾಣ ಪತ್ರ ನೀಡಲು ಸೆನ್ಸಾರ್‌ ಮಂಡಳಿ ಹಿಂದೇಟು ಹಾಕಿದೆ.

ಬೇರೆ ಬೇರೆ ವಯಸ್ಸಿನ ನಾಲ್ವರು ಮಹಿಳೆಯರ ಬದುಕು, ಭಾವನೆ ಹಾಗೂ ಸಮಾಜದ ಕಟ್ಟುಪಾಡುಗಳನ್ನು ಅವರು ಮೀರಲು ಯತ್ನಿಸುವ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.

ADVERTISEMENT

ಪ್ರಕಾಶ್‌ ಝಾ ನಿರ್ಮಾಣದ ಈ ಚಿತ್ರವನ್ನು ಅಲಂಕೃತ್ ಶ್ರೀವಾಸ್ತವ ನಿರ್ದೇಶಿಸಿದ್ದಾರೆ. ಈ ಸಿನಿಮಾ 2016ರ ಅಕ್ಟೋಬರ್‌ 26ರಂದು ಮಾಮಿ (ಮುಂಬೈ ಅಕಾಡೆಮಿ ಆಫ್‌ ದಿ ಮೂವಿಂಗ್‌ ಇಮೇಜ್‌) ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಈ ಚಿತ್ರೋತ್ಸವದಲ್ಲಿ ಲಿಂಗ ಸಮಾನತೆಯ ಆಶಯದ ಚಿತ್ರ ಎಂದು ಗುರುತಿಸಿ ಈ ಚಿತ್ರಕ್ಕೆ ‘ಆಕ್ಸ್‌ಫಾಮ್‌’ ಪ್ರಶಸ್ತಿ ನೀಡಲಾಗಿತ್ತು.

ಈ ಚಿತ್ರವು ಲಂಡನ್‌ ಈಸ್ಟ್‌ ಏಷ್ಯಾ ಚಿತ್ರೋತ್ಸವದಲ್ಲಿಯೂ ಪ್ರದರ್ಶನ ಕಂಡು ಅಂತರರಾಷ್ಟ್ರೀಯ ಚಿತ್ರ ನಿರ್ಮಾತೃಗಳ ಗಮನ ಸೆಳೆದಿದೆ. ಆದರೆ, ಚಿತ್ರ ಮಹಿಳಾ ಪರ ಕತೆಯನ್ನು ಹೊಂದಿದೆ ಎಂಬ ಕಾರಣ ನೀಡಿ ಈ ಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸಲು ಅಗತ್ಯವಾದ ಪ್ರಮಾಣಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿದೆ.

ಕೊಂಕಣಾ ಸೇನ್‌ ಶರ್ಮಾ, ರತ್ನಾ ಪಾಠಕ್‌ ಷಾ, ಆಹಾನಾ ಕುಮ್ರಾ ಹಾಗೂ ಪ್ಲಬಿತಾ ಬೋರ್ತಾಕುರ್‌ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.