ADVERTISEMENT

‘ಲಿಪ್‌ಸ್ಟಿಕ್‌...’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲು ಸೂಚನೆ

ಪಿಟಿಐ
Published 25 ಏಪ್ರಿಲ್ 2017, 19:58 IST
Last Updated 25 ಏಪ್ರಿಲ್ 2017, 19:58 IST
‘ಲಿಪ್‌ಸ್ಟಿಕ್‌...’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲು ಸೂಚನೆ
‘ಲಿಪ್‌ಸ್ಟಿಕ್‌...’ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ನೀಡಲು ಸೂಚನೆ   

ನವದೆಹಲಿ: ತೀವ್ರ ವಿವಾದ ಸೃಷ್ಟಿಸಿರುವ ‘ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಕಾ’ ಸಿನಿಮಾಕ್ಕೆ ‘ಎ’ ಪ್ರಮಾಣಪತ್ರ ನೀಡುವಂತೆ ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ಮಂಡಳಿಯು (ಎಫ್‌ಸಿಎಟಿ) ಸಿಬಿಎಫ್‌ಸಿಗೆ ನಿರ್ದೇಶನ ನೀಡಿದೆ.

ಮಹಿಳೆಯರನ್ನು ಕೀಳಾಗಿ ಚಿತ್ರಿಸಲಾಗಿದೆ ಎಂಬ ಕಾರಣಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿತ್ತು.

ಹೀಗಾಗಿ ನಿರ್ದೇಶಕಿ ಅಲಂಕೃತಾ ಶ್ರೀವಾಸ್ತವ ಮತ್ತು ನಿರ್ಮಾಪಕ ಪ್ರಕಾಶ್‌ ಝಾ ಎಫ್‌ಸಿಎಟಿ ಮೊರೆ ಹೋಗಿದ್ದರು. ಚಿತ್ರದ ಉದ್ದೇಶಕ್ಕೆ ತೊಂದರೆಯಾಗದಂತೆ ಕೆಲವು ಸನ್ನಿವೇಶಗಳಿಗೆ ಕತ್ತರಿ ಹಾಕುವಂತೆಯೂ ಅದು ಸೂಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.