ADVERTISEMENT

ವಿಜ್ಞಾನ ನಿಯೋಗಕ್ಕೆ ವಿಜ್ಞಾನಿಗಳ ನೇತೃತ್ವ

​ಪ್ರಜಾವಾಣಿ ವಾರ್ತೆ
Published 7 ಜೂನ್ 2014, 19:30 IST
Last Updated 7 ಜೂನ್ 2014, 19:30 IST

ನವದೆಹಲಿ: ಸಾಮಾನ್ಯವಾಗಿ ವಿದೇಶ­ಗಳಿಗೆ ತೆರಳುವ ವಿಜ್ಞಾನ ನಿಯೋಗದ ನೇತೃತ್ವವನ್ನು ಸಚಿವರು ವಹಿಸುತ್ತಾರೆ. ಇದು 60 ವರ್ಷಗಳಿಂದಲೂ ನಡೆ­ದು ಬಂದ ಸಂಪ್ರದಾಯ. ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈ ಸಂಪ್ರದಾಯ­ ಮುರಿದಿದೆ. ವಿದೇಶಕ್ಕೆ ತೆರ­ಳುವ ವೈಜ್ಞಾ­ನಿಕ ನಿಯೋಗದ ನೇತೃತ್ವ­ವನ್ನು ಹೆಸ­ರಾಂತ ವಿಜ್ಞಾನಿಗಳು ವಹಿಸ­ಬೇಕೇ ಹೊರತೂ ಸಚಿವರಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆ.

ಇಂತಹ ಪ್ರವಾಸಗಳು ರಾಜಕೀಯ ನಾಯಕರಿಗೆ ವಿಹಾರ ಆಗಬಾರದು. ವಿಜ್ಞಾನಿಗಳು ಇದರಿಂದ ಹೆಚ್ಚು ಪ್ರಯೋ­ಜನ ಪಡೆಯಬೇಕು ಎನ್ನುವ  ಉದ್ದೇಶ­ದಿಂದ ಕೇಂದ್ರ ಈ ನಿಲುವು ತಳೆದದಿದೆ.

‘ನಮ್ಮ ಈ ನಿರ್ಧಾರದಿಂದ ವಿಜ್ಞಾನಿ­ಗಳಿಗೆ ಹೆಚ್ಚು ಪ್ರಯೋಜನವಾ­ಗಲಿದೆ. ಅವರು ವಿದೇಶ ಅಥವಾ ದೇಶದಲ್ಲಿ ತಮ್ಮ ಸಹೋದ್ಯೋಗಿಗಳ ಜತೆ ಸಮಾ­ಲೋ­ಚನೆ ನಡೆಸುವುದಕ್ಕೆ ಅವಕಾಶ ಮಾಡಿ­­ಕೊಡುವುದು ನಮ್ಮ ಉದ್ದೇಶ. ಇದ­­ರಿಂದ ದೇಶಕ್ಕೆ ಪ್ರಯೋಜ­ನ­ವಾಗ­ಲಿದೆ’ ಎಂದು ವಿಜ್ಞಾನ ಹಾಗೂ ತಂತ್ರ­ಜ್ಞಾನ, ಭೂವಿಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

‘ಸ್ಯಾಂಟಿಯಾಗೊ ಹಾಗೂ ಬಾಸ್ಟನ್‌­ನಲ್ಲಿ ನಡೆಯಲಿರುವ ಎರಡು ಅಂತರ­ರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಿಗೆ ವಿಜ್ಞಾನಿ­ಗಳನ್ನು ಪ್ರತಿನಿಧಿಗಳನ್ನಾಗಿ ಕಳುಹಿಸು­­­ವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದೂ  ತಿಳಿಸಿದ್ದಾರೆ.

‘ವಿಜ್ಞಾನವನ್ನು ಈ ದೇಶದಲ್ಲಿ ಸಾಮಾ­ಜಿಕ ಬದಲಾವಣೆಗೆ ಬಳಸಿ­ಕೊಳ್ಳ­­ಬೇಕು ಎನ್ನು­­ವುದು ನಮ್ಮ ಆಸೆ. ವಿಜ್ಞಾನ ಸಮಾಜ ಸ್ನೇಹಿ­ಯಾಗಬೇಕು ಎನ್ನು­ವುದು ನಮ್ಮ ಹಂಬಲ’ ಎಂದೂ ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.