ADVERTISEMENT

ವಿದೇಶಾಂಗ ವಕ್ತಾರರಾಗಿ ಸ್ವರೂಪ್‌ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 12:43 IST
Last Updated 18 ಏಪ್ರಿಲ್ 2015, 12:43 IST

ನವದೆಹಲಿ (ಪಿಟಿಐ): ಹಿರಿಯ ರಾಜತಾಂತ್ರಿಕ ಅಧಿಕಾರಿ ವಿಕಾಸ್ ಸ್ವರೂಪ್‌ ಅವರು ವಿದೇಶಾಂಗ ಇಲಾಖೆ ವಕ್ತಾರರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.

ಸ್ವರೂಪ್‌ 1986ರ ಐಎಫ್‌ಎಸ್ (ಭಾರತೀಯ ವಿದೇಶಾಂಗ ಸೇವೆ) ಅಧಿಕಾರಿ. ಉಭಯ ಸಯ್ಯದ್ ಅಕ್ಬರುದ್ದೀನ್ ಹಾಗೂ ಸ್ವರೂಪ್‌ ಅವರು ಶನಿವಾರ ಕೊನೆಗೊಂಡ ಮೂರು ರಾಷ್ಟ್ರಗಳ ವಿದೇಶಿ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಯೋಗದಲ್ಲಿದ್ದರು. ಶನಿವಾರ ಮುಂಜಾನೆ 6ಗಂಟೆಗೆಯಷ್ಟೇ ಅವರು ನವದೆಹಲಿಗೆ ವಾಪಸ್ಸಾಗಿದ್ದರು.‌

ಸ್ವರೂಪ್‌ ಅವರು ಬರೆದ ಅಂತರರಾಷ್ಟ್ರೀಯ ಖ್ಯಾತಿಯ ಪುಸ್ತಕ  "Q&A", ಸಂ ಡಾಗ್ ಮಿಲೇನಿಯರ್‌ ಚಲನ ಚಿತ್ರವನ್ನಾಗಿ ಮಾಡಲಾಗಿತ್ತು. ಅದು 2009ರಲ್ಲಿ ಮೂರು ಆಸ್ಕರ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ADVERTISEMENT

ವಿದೇಶಾಂಗ ಇಲಾಖೆಯ ವಕ್ತಾರರಾಗಿ ಪದಗ್ರಹಣ ಸ್ವೀರಿಸುವ ಮುನ್ನ ಸ್ವರೂಪ್‌ ಇದೇ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.