ADVERTISEMENT

ವೇಗದ ರೈಲು ಪ್ರಾಯೋಗಿಕ ಸಂಚಾರ

ಮೊರಾದಾಬಾದ್‌–ಬರೇಲಿ ಮಾರ್ಗ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಮೊರಾದಾಬಾದ್‌ ಹಾಗೂ ಬರೇಲಿ ಮಾರ್ಗದ ವೇಗದ ರೈಲು
ಮೊರಾದಾಬಾದ್‌ ಹಾಗೂ ಬರೇಲಿ ಮಾರ್ಗದ ವೇಗದ ರೈಲು   

ನವದೆಹಲಿ (ಪಿಟಿಐ): ಉತ್ತರಪ್ರದೇಶದ ಮೊರಾದಾಬಾದ್‌ ಹಾಗೂ ಬರೇಲಿ ಮಾರ್ಗದಲ್ಲಿ  ಹಗುರ ಹಾಗೂ ವೇಗದ ರೈಲಿನ ಪ್ರಾಯೋಗಿಕ ಸಂಚಾರ ಭಾನುವಾರ ನಡೆಯಿತು.

ಸ್ಪೇನ್‌ನ ಟಾಲ್ಗೊ ಕಂಪೆನಿಯ ಈ ರೈಲು ಗಂಟೆಗೆ 115 ಕಿ. ಮೀ ವೇಗದಲ್ಲಿ ಚಲಿಸಿದೆ. ರೈಲುಗಳ ವೇಗ ಹೆಚ್ಚಿಸುವ ಇಲಾಖೆಯ ಕಾರ್ಯತಂತ್ರದ ಅಂಗವಾಗಿ ಈ ಪ್ರಯೋಗ ನಡೆಯಿತು.

ಮೊದಲ ಪರೀಕ್ಷಾರ್ಥ ಪ್ರಯೋಗದಲ್ಲಿ ರೈಲು 4,500 ಎಚ್‌ಪಿ ಡೀಸೆಲ್‌ ಎಂಜಿನ್‌ ಮತ್ತು ಒಂಬತ್ತು ಬೋಗಿಗಳೊಂದಿಗೆ  90 ಕಿ.ಮೀ ಸಂಚರಿತು. ನಂತರ ಮಾತನಾಡಿದ ಅಧಿಕಾರಿಗಳು ‘ಈ ಪ್ರಯಾಣ ಸುಗಮವಾಗಿ ನಡೆಯಿತು’ ಎಂದು ಬಣ್ಣಿಸಿದರು.

ಬರೇಲಿಯಿಂದ ಬೆಳಿಗ್ಗೆ 9.05ಕ್ಕೆ ಹೊರಟ ರೈಲು ಗಂಟೆಗೆ 110–115 ಕಿ. ಮೀ. ವೇಗದಲ್ಲಿ ಸಂಚರಿಸಿ, ಮೊರಾದಾಬಾದ್‌ ಅನ್ನು ಬೆಳಿಗ್ಗೆ 10.15ಕ್ಕೆ ತಲುಪಿತು ಎಂದು ಅಧಿಕಾರಿಗಳು ತಿಳಿಸಿದರು. 

ಈಗ ದೆಹಲಿ–ಮುಂಬೈ ನಡುವೆ ರಾಜಧಾನಿ ಎಕ್ಸ್‌ಪ್ರೆಸ್‌ ಗಂಟೆಗೆ 85 ಕಿ. ಮೀ ವೇಗದಲ್ಲಿ ಸಂಚರಿಸುತ್ತಿದ್ದು, ಟಾಲ್ಗೊದ ಹಗುರ ರೈಲಿನಿಂದಾಗಿ ಶೇ 30ರಷ್ಟು ಇಂಧನ ಉಳಿತಾಯವಾಗಲಿದೆ.

ಇನ್ನೂ ಮೂರು ಬಾರಿ ಪರೀಕ್ಷಾರ್ಥ ಸಂಚಾರ ಮಾಡಬೇಕಿದ್ದು, ನಂತರ ಯಶಸ್ಸು ಹಾಗೂ ವಿಫಲತೆಯ ಬಗ್ಗೆ ಹೇಳಬಹುದು ಎಂದು ಸಂಶೋಧನೆ ಹಾಗೂ ಗುಣಮಟ್ಟ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಹಮೀದ್ ಅಖ್ತರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.