ADVERTISEMENT

ವೇತನ ಹೆಚ್ಚಳ: ನಾಳೆ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 10:10 IST
Last Updated 28 ಜೂನ್ 2016, 10:10 IST
ವೇತನ ಹೆಚ್ಚಳ: ನಾಳೆ ಸಂಪುಟ ಅನುಮೋದನೆ
ವೇತನ ಹೆಚ್ಚಳ: ನಾಳೆ ಸಂಪುಟ ಅನುಮೋದನೆ   

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು ಶೇಕಡಾ 15ರಷ್ಟು ಹೆಚ್ಚಿಸುವಂತೆ 7ನೇ ವೇತನ ಆಯೋಗ ಮಾಡಿರುವ ಶಿಫಾರಸುಗಳ ಜಾರಿಗೆ ಕೇಂದ್ರ ಸಂಪುಟ ಬುಧವಾರ ಬಹುತೇಕ ಅನುಮೋದನೆ ನೀಡಲಿದೆ. 

ವೇತನ ಆಯೋಗವು ಮೂಲ ವೇತನದಲ್ಲಿ ಶೇ 14.27ರಷ್ಟು ಹೆಚ್ಚಿಸಲು ಶಿಫಾರಸು ಮಾಡಿದೆ. ಹಿಂದಿನ 70 ವರ್ಷಗಳಲ್ಲಿ ಇಷ್ಟು ಕಡಿಮೆ ಶಿಫಾರಸು ಮಾಡಿದ್ದು ಇದೇ ಮೊದಲ ಬಾರಿ. 6ನೇ ವೇತನ ಆಯೋಗ ಮೂಲ ವೇತನದಲ್ಲಿ ಶೇ 20ರಷ್ಟು ಹೆಚ್ಚಿಸಲು ಶಿಫಾಸರು ಮಾಡಿತ್ತು. ಆದರೆ, 2008ರಲ್ಲಿ ಸರ್ಕಾರ ಶಿಫಾರಸು ಜಾರಿ ಮಾಡುವಾಗ ದುಪ್ಪಟ್ಟು ಹೆಚ್ಚಳ ಮಾಡಿತ್ತು.

ವೇತನದಲ್ಲಿ ಒಟ್ಟಾರೆ 23.55ರಷ್ಟು ಹೆಚ್ಚಳವಾಗಲಿದೆ. ಒಂದು ಕೋಟಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಈ ಸೌಲಭ್ಯ ಪಡೆಯಲಿದ್ದಾರೆ.

ಆರ್ಥಿಕ ಹೊರೆಯ ನಡುವೆಯೂ ಸರ್ಕಾರ ಸಮಿತಿ ಮಾಡಿರುವ ಶಿಫಾರಸ್ಸಿಗಿಂತ ಮೂಲ ವೇತನದಲ್ಲಿ ಶೇ 18ರಿಂದ 20ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.