ADVERTISEMENT

ವ್ಯಾಪಂ: ಸಿಬಿಐನಿಂದ ಮತ್ತೆ ಎರಡು ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 17 ಜುಲೈ 2015, 9:59 IST
Last Updated 17 ಜುಲೈ 2015, 9:59 IST

ಭೊಪಾಲ್(ಪಿಟಿಐ): ಸುಪ್ರೀಂಕೋರ್ಟ್‌ನ ಉಸ್ತುವಾರಿಯಲ್ಲಿ ವ್ಯಾಪಂ ಹಗರಣದ ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ ತಂಡ ಶುಕ್ರವಾರ ಪ್ರಕರಣ ಸಂಬಂಧ ಮತ್ತೆ ಎರಡು ಎಫ್ಐಆರ್ ದಾಖಲಿಸಿದೆ.

ಎಂಬಿಬಿಎಸ್ ವಿದ್ಯಾರ್ಥಿನಿ ನಮ್ರತಾ ದಾಮೋರ್ ನಿಗೂಢ ಸಾವಿನ ಸಂಬಂಧ ಸಿಬಿಐ ಕೊಲೆ ಪ್ರಕರಣ ದೂರು ದಾಖಲಿಸಿದೆ. ಶುಕ್ರವಾರ ಎರಡು ಎಫ್ಐಆರ್ ದಾಖಲಿಸಿರುವ ಸಿಬಿಐ, ಬುಧವಾರ ಮೂರು ಎಫ್ಐಆರ್ ದಾಖಲಿಸಿತ್ತು.

ಮರುಜೀವ: ಈ  ಹಗರಣದಲ್ಲಿ ಹೆಸರು ಕೇಳಿ ಬಂದ ಎಂಬಿಬಿಎಸ್‌ ವಿದ್ಯಾರ್ಥಿನಿ ನಮ್ರತಾ ದಾಮೋರ್‌ ನಿಗೂಢ ಸಾವಿನ ಪ್ರಕರಣವನ್ನು ಮರು ತನಿಖೆ ಮಾಡುವುದಕ್ಕೆ ಮಧ್ಯಪ್ರದೇಶ ಪೊಲೀಸರು ನಿರ್ಧರಿಸಿದ್ದರು. ‘ಇದು ಬಲವಂತವಾಗಿ ಉಸಿರುಕಟ್ಟಿಸಿ  ಮಾಡಿದ ನರಹತ್ಯೆ’ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿತ್ತು. ಆದರೆ, ಪೊಲೀಸರು ಇದೊಂದು ಆತ್ಮಹತ್ಯೆ ಎಂದು ಪ್ರಕರಣವನ್ನು ಮುಚ್ಚಿಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT