ADVERTISEMENT

ಶಾರದಾ ಹಗರಣ: ಮುಕ್ತಾಯ ಹಂತ ತಲುಪಿದ ತನಿಖೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2014, 11:39 IST
Last Updated 3 ಸೆಪ್ಟೆಂಬರ್ 2014, 11:39 IST

ಕೋಲ್ಕತ್ತ (ಪಿಟಿಐ): ಬಹುಕೋಟಿ ಮೊತ್ತದ ಶಾರದಾ ಚಿಟ್‌ಫಂಡ್‌ ಹಗರಣದ ತನಿಖೆ ಅಂತಿಮ ಹಂತ ತಲುಪಿದೆ ಎಂದು ಜಾರಿ ನಿರ್ದೇಶನಾಲಯ ಬುಧವಾರ ತಿಳಿಸಿದೆ.

ಶಾರದಾ ಚಿಟ್‌ಫಂಡ್‌ ಹಗರಣದಲ್ಲಿ  ನಡೆದಿದೆ ಎನ್ನಲಾದ ಹಣ ಲೇವಾದೇವಿ ಬಗ್ಗೆ 2013ರ ಏಪ್ರಿಲ್‌ನಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.

‘ಶಾರದಾ ಪ್ರಕರಣ ಸಂಬಂಧ ಜಾರಿ  ನಿರ್ದೇಶನಾಲಯ ನಡೆಸುತ್ತಿರುವ ತನಿಖೆ ಅಂತಿಮ ಹಂತ ತಲುಪಿದ್ದು,  ಅಪರಾಧದ ಬಹುಭಾಗವನ್ನು ಪತ್ತೆಮಾಡುವಲ್ಲಿ ನಮಗೆ ಸಾಧ್ಯವಾಗಿದೆ’ ಎಂದು ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕ ನುಡಿದಿದ್ದಾರೆ.

ADVERTISEMENT

ಅಲ್ಲದೇ, ‘ಪ್ರಕರಣ ಸಂಬಂಧ ಸಿಬಿಐ ನಡೆಸುತ್ತಿರುವ ತನಿಖೆಯ ಮುಗಿಯುತ್ತಿದ್ದಂತೆಯೇ ಆರೋಪಿಗಳ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್‌ ದಾಖಲಿಸಲಿದೆ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.