ADVERTISEMENT

ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್ ನಟಿ ಕಂಗನಾ, ಆಸ್ಪತ್ರೆಗೆ ದಾಖಲು

‘ಮಣಿಕರ್ಣಿಕಾ–ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾ ಶೂಟಿಂಗ್

ಏಜೆನ್ಸೀಸ್
Published 20 ಜುಲೈ 2017, 10:13 IST
Last Updated 20 ಜುಲೈ 2017, 10:13 IST
ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್ ನಟಿ ಕಂಗನಾ, ಆಸ್ಪತ್ರೆಗೆ ದಾಖಲು
ಶೂಟಿಂಗ್ ವೇಳೆ ಗಾಯಗೊಂಡ ಬಾಲಿವುಡ್ ನಟಿ ಕಂಗನಾ, ಆಸ್ಪತ್ರೆಗೆ ದಾಖಲು   

ಮುಂಬೈ: ಬಾಲಿವುಡ್ ನಟಿ ಕಂಗನಾ ರನೌಟ್ ಅವರಿಗೆ ಶೂಟಿಂಗ್ ಸಂದರ್ಭದಲ್ಲಿ ಗಾಯವಾಗಿದ್ದು, ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವೈದ್ಯರು ಹೇಳಿದ್ದಾರೆ.

ಬುಧವಾರ ಕಂಗನಾ ಅವರು ಸಹ ನಟ ನಿಹಾರ್ ಪಾಂಡ್ಯ ಅವರ ಜೊತೆ ‘ಮಣಿಕರ್ಣಿಕಾ–ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾದ ಯುದ್ಧದ ದೃಶ್ಯದ ಶೂಟಿಂಗ್‌ನಲ್ಲಿ ತೊಡಗಿದ್ದರು. ಈ ವೇಳೆ ಇಬ್ಬರ ನಡುವೆ ಕತ್ತಿ ವರಸೆ ನಡೆಯುವ ಸಂದರ್ಭದಲ್ಲಿ ಅಚನಕ್ಕಾಗಿ ಕಂಗನಾ ಅವರ ಹಣೆಯ ಭಾಗಕ್ಕೆ ಕತ್ತಿ  ತಗುಲಿ ಗಾಯವಾಗಿದೆ.

ತಕ್ಷಣವೇ ಕಂಗನಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಗಾಯಕ್ಕೆ 15 ಹೊಲಿಗೆ ಹಾಕಲಾಗಿದೆ. ಒಂದು ವಾರದ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ADVERTISEMENT

‘ಯುದ್ಧದ ಸನ್ನಿವೇಶದಲ್ಲಿ ತೊಡಗಿದ್ದಾಗ ಮುಖದ ಮೇಲೆ ಅನಿರೀಕ್ಷಿತವಾಗಿ ಗಾಯವಾಗಿದೆ. ನನ್ನ ಮುಖದ ಮೇಲೆ ರಕ್ತ ಹರಿದಾಗ ಕೊಂಚ ಮಟ್ಟಿಗೆ ಹೆದರಿದ್ದೆ. ಆದರೆ ಈ ವೇಳೆ ರಾಣಿಯ ನಿಜ ಜೀವನದ ಅನುಭವವಾಯಿತು’ ಎಂದು ಕಂಗನಾ ಹೇಳಿದ್ದಾರೆ.

ಕಂಗನಾ ಅವರ ಬಹುನಿರೀಕ್ಷಿತ ‘ಮಣಿಕರ್ಣಿಕಾ–ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಒಂದು ವಾರದಿಂದ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.