ADVERTISEMENT

ಶೋಧ ಕಾರ್ಯಕ್ಕೆ ಸೇನೆ ನೆರವು ಕೋರಿಕೆ

ಬಿಯಾಸ್ ದುರಂತ

​ಪ್ರಜಾವಾಣಿ ವಾರ್ತೆ
Published 11 ಜೂನ್ 2014, 9:35 IST
Last Updated 11 ಜೂನ್ 2014, 9:35 IST

ಮಂಡಿ (ಹಿಮಾಚಲಪ್ರದೇಶ)(ಪಿಟಿಐ):  ಹಿಮಾಚಲ ಪ್ರದೇಶದ ಬಿಯಾಸ್ ನದಿಯಲ್ಲಿ ಕೊಚ್ಚಿಹೋದ ವಿದ್ಯಾರ್ಥಿಗಳಲ್ಲಿ ಇನ್ನು 19 ವಿದ್ಯಾರ್ಥಿಗಳು ಪತ್ತೆಯಾಗಬೇಕಿದ್ದು, ಶೋಧ ಕಾರ್ಯ ತೀವ್ರಗೊಳಿಸಲು ಸೇನೆಯ ನೆರವು ನೀಡುವಂತೆ  ತೆಲಂಗಾಣ ಸರ್ಕಾರವು ಬುಧವಾರ ಕೇಂದ್ರ ಸರ್ಕಾರವನ್ನು ಕೇಳಿದೆ.

ಶೋಧ ಕಾರ್ಯ ಚುರುಕುಗೊಳಿಸಲು ಸೇನೆಯ ರಕ್ಷಣಾ ತಂಡದ 500 ಯೋಧರನ್ನು ನಿಯೋಜಿಸುವಂತೆ ನಮ್ಮ ನಾಯಕ ಜಿತೇಂದ್ರರೆಡ್ಡಿ ಅವರು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿದ್ದಾರೆ ಎಂದು  ವಿದ್ಯಾರ್ಥಿಗಳ ಕುಟುಂಬದವರ ಜತೆ ಬೀಡು ಬಿಟ್ಟಿರುವ ತೆಲಂಗಾಣ ಗೃಹ ಸಚಿವ ನಯನಿ ನರಸಿಂಹ ರೆಡ್ಡಿ ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪ್ರಾಧಿಕಾರದ (ಎನ್‌ಡಿಎಂಎ)ಉಪಾಧ್ಯಕ್ಷ ಶಶಿಧರ್ ರೆಡ್ಡಿ ಅವರು ಇಂದು ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT