ADVERTISEMENT

ಸಚಿವರಿಂದ ಮಾಹಿತಿ ಕೇಳಿದ ನರೇಂದ್ರ ಮೋದಿ

ಸ್ವಾತಂತ್ರ್ಯೋತ್ಸವದ ಚೊಚ್ಚಲ ಭಾಷಣ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ನವದೆಹಲಿ (ಪಿಟಿಐ):  ಸ್ವಾತಂತ್ರ್ಯೋತ್ಸವದ ಚೊಚ್ಚಲ ಭಾಷಣ ಸಿದ್ಧಪಡಿಸಿಕೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವಾಲಯಗಳಿಂದ ಮಾಹಿತಿ ಕೇಳಿದ್ದಾರೆ.

ಐತಿಹಾಸಿಕ ಕೆಂಪು ಕೋಟೆಯಲ್ಲಿ ಆಗಸ್ಟ್‌್ 15ರಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಮೋದಿ ಅವರ ಭಾಷಣದಲ್ಲಿ ಮೂಲಸೌಕರ್ಯ ಹಾಗೂ ಕೌಶಲ ಅಭಿವೃದ್ಧಿ, ಉದ್ಯೋಗ  ಸೃಷ್ಟಿ, ಹಣದುಬ್ಬರ ನಿಯಂತ್ರಣ ಹಾಗೂ ದೇಶದಾದ್ಯಂತ 100 ಸುಸಜ್ಜಿತ ನಗರಗಳ ನಿರ್ಮಾಣ ಸೇರಿದಂತೆ ಹಲವಾರು ವಿಷಯಗಳು ಪ್ರಸ್ತಾಪವಾಗಲಿವೆ ಎಂದು ನಿರೀಕ್ಷಿಸಲಾಗಿದೆ.

ಬಜೆಟ್‌ನಲ್ಲಿ ಘೋಷಿಸಲಾದ ಪ್ರಸ್ತಾ­ವನೆ­­ಗಳ ಅನುಷ್ಠಾನಕ್ಕೆ ಸಿದ್ಧಪಡಿಸಿ­ಕೊಂಡಿ­­ರುವ ರೂಪುರೇಷೆಗಳ ವಿವರ ನೀಡುವಂತೆ ಹಣಕಾಸು ಸಚಿವಾಲ­ಯವು ಇತರ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಪತ್ರ ಬರೆದಿದೆ. ಜುಲೈ ಅಂತ್ಯದೊಳಗೆ ಈ ಎಲ್ಲ ಮಾಹಿತಿ­ಗಳನ್ನು ಕಳಿಸುವಂತೆ ಸೂಚಿಸಲಾಗಿದೆ.

‘ಸಂಪುಟ ಕಾರ್ಯದರ್ಶಿ ಅಜಿತ್‌ ಸೇಥ್‌ ಈ ಮಾಹಿತಿಗಳನ್ನು ಪರಿಶೀಲಿ­ಸುವರು. ಪ್ರಧಾನಿ ಭಾಷಣದಲ್ಲಿ ಯಾವೆಲ್ಲ ಅಂಶಗಳು ಇರಬೇಕು ಎನ್ನುವುದರ ಬಗ್ಗೆ ಆಗಸ್ಟ್‌ 10ರೊಳಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾ­ಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.